ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ತಾ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವೆ: ಖಾದರ್ ಭರವಸೆ

Rashmi Kasaragodu
Updated On : 11 Jul 2013, 1:17 am

ಟೇಕಲ್: ಮಾಲೂರು ತಾಲೂಕಿನ ಆರೋಗ್ಯ ಇಲಾಖೆಯಲ್ಲಿ 100 ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕೊರತೆ ನೀಗಿಸುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.
ಹುಳದೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹುಳದೇನಹಳ್ಳಿ ಗ್ರಾಮದಲ್ಲಿ ಜಿ.ಪಂ. ವತಿಯಿಂದ 1 ಕೋಟಿ ರು. ಅಂದಾಜು ವೆಚ್ಚದಲ್ಲಿ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನೆ, ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ ಶಾಸಕ ಮಂಜುನಾಥಗೌಡ ಈ ವಿಷಯ ತಿಳಿಸಿದರು.
ಜಿ.ಪಂ. ಸದಸ್ಯೆ ರತ್ನಮ್ಮನಂಜೇಗೌಡ ಹಾಗೂ ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರ ಬಹಳ ದಿನಗಳ ಬೇಡಿಕೆ ಹಾಗೂ ಒತ್ತಾಯದಿಂದ ಇದನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮಗಾರಿ ಉತ್ತಮ ಗುಣಮಟ್ಟದ್ದಾಗಿರಬೇಕೆಂದು ಇದರಲ್ಲಿ ಯಾವುದೇ ತಪ್ಪು ನಡೆದರೆ ರಾಜಿ ಸಂಧಾನವಿಲ್ಲವೆಂದು ಎಚ್ಚರಿಸಿದರು.
ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ ರಾಮು ಮಾತನಾಡಿ ನಂಜೇಗೌಡರ ಪರಿಶ್ರಮದಿಂದ ಈ ನೂತನ ಕಟ್ಟಡ ಬರಲು ಕಾರಣವಾಯಿತು. ಹುಳದೇನಹಳ್ಳಿ ಆರೋಗ್ಯ ಕೇಂದ್ರ ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವೈದ್ಯರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ವೈ. ನಂಜೇಗೌಡರು ಮಾತನಾಡಿ ಮುಳಬಾಗಿಲು ಜಿ.ಪಂ. ಕ್ಷೇತ್ರಕ್ಕೆ ಹೋಗಬೇಕಾದ ಈ ಅನುದಾನ ಜಿ.ಪಂ. ಅಧ್ಯಕ್ಷರ ಎಲ್ಲಾ ಸದಸ್ಯರ ಸಹಕಾರದಿಂದ ಇಲ್ಲಿಗೆ ಆಸ್ಪತ್ರೆ ನಿರ್ಮಿಸಲು ಸಹಕಾರಿಯಾಯಿತೆಂದು ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಜಿಲ್ಲಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೋಲ್ ಮೋಹನ್ ಆಸ್ಪತ್ರೆಗೆ ಕಾಂಪೌಂಡ್ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹುಳದೇನಹಳ್ಳಿ ಗ್ರಾ.ಪಂ. ಅಧ್ಯಕ್ಷ  ಎಂ. ರವೀಂದ್ರ, ಜೆ.ಡಿ.ಎಸ್. ಮುಖಂಡ ಹೆಚ್.ವಿ. ಚಂದ್ರಶೇಖರ್‌ಗೌಡ, ತಾಲೂಕು ಆರೋಗ್ಯ ಅಧಿಕಾರಿ ಅನುರಾಧ, ಹುಳದೇನಹಳ್ಳಿಯ ವೈದ್ಯ ಡಾ. ಶೃತಿ, ಪಿ.ಡಿ.ಒ. ಮರಿದೇವರು, ಮುನಿಶಾಮಿಗೌಡ, ತಿಮ್ಮೆಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಯಲ್ಲಮ್ಮ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement