ಇಂಡಿಯನ್ ಓವರ್‌ಸಿಸ್ ಬ್ಯಾಂಕ್ ಶಾಖೆ ಶುರು
ಕ.ಪ್ರ.ವಾರ್ತೆ ಮಾಲೂರು ಜು. 11
ಕೇಂದ್ರ ಸರ್ಕಾರದ ಅರ್ಥಿಕ ನೀತಿಗಳಿಗೆ ದೇಶದ ಬ್ಯಾಂಕಿಂಕ್ ವ್ಯವಸ್ಥೆ ಉತ್ತಮ ಸಹಕಾರ ನೀಡುತ್ತಿದೆ ಎಂದು ಇಂಡಿಯನ್ ಓವರ್‌ಸಿಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ. ನರೇಂದ್ರ ಹೇಳಿದರು.
ಅವರು ತಾಲೂಕಿನ ಚಿಕ್ಕತಿರುಪತಿಯಲ್ಲಿ ಇಂಡಿಯನ್ ಓವರ್‌ಸಿಸ್ ಬ್ಯಾಂಕಿನ ನೂತನ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡುತ್ತ ದೇಶದ ಪ್ರತಿ ಪ್ರಜೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯಡಿ ಬರುವ ಹಾಗೆ ಕೇಂದ್ರ ಸರ್ಕಾರವು ಅರ್ಥಿಕ ನೀತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೂ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬರುವ ಹಾಗೆ ಆಗಿದೆ.
ಜನರಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಜ್ಞಾನವೃದ್ಧಿಯಾಗುವ ಜೊತೆಯಲ್ಲಿ ಗಳಿಕೆಯ ಹಣವನ್ನು ಉಳಿಸಿಕೊಳ್ಳುವ ಪ್ರವೃತ್ತಿ ಬರಲಿದೆ ಎಂದರು.ಮುಖ್ಯ ಪ್ರಾದೇಶಿಕ ಪ್ರಬಂಧಕ ಕೆ.ಅನಿಲ್, ರಾಷ್ಟ್ರೀಯ ಬ್ಯಾಂಕಿಂಗ್ ಮಹಾ ಪ್ರಬಂಧಕ ವಸಂತ್ ಕುಮಾರ್, ನೂತನ ಶಾಖಾ ವ್ಯವಸ್ಥಾಪಕ ಎಂ.ಆರ್. ವಿಶ್ವನಾಥ್, ಚಿಕ್ಕತಿರುಪತಿ ಪಂಚಾಯ್ತಿ ಉಪಾಧ್ಯಕ್ಷ ವಿ. ನಾಗೇಶ್, ರಾಜೇಂದ್ರ ರೆಡ್ಡಿ, ಎಟ್ಟುಕೋಡಿ ವೀರಭದ್ರಪ್ಪ ಇದ್ದರು.