ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೋಮಾಳ ಸರ್ಕಾರದ್ದು, ಅಕ್ರಮಕ್ಕೆ ಆಸ್ಪದ ಬೇಡ

Rashmi Kasaragodu
Updated On : 12 Jul 2013, 1:11 am

ಚೋಳಘಟ್ಟದ ಭೂ ವಿವಾದ: ಗ್ರಾಮಕ್ಕೆ ಭೇಟಿ ನೀಡಿ ಖಾದರ್ ಸೂಚನೆ


ಕ.ಪ್ರ.ವಾರ್ತೆ   ಕೋಲಾರ   ಜು.11
ಚೋಳಘಟ್ಟ ಗ್ರಾಮದಲ್ಲಿನ ಭೂ ವಿವಾದ ಸ್ಥಳ ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಭೇಟಿ ನೀಡಿ ಎರಡು ಕಡೆಯವರೊಂದಿಗೆ ಚರ್ಚಿಸಿದರು.
ಸರ್ಕಾರದ ಕಾನೂನು ನಿಯಮಗಳಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಅಕ್ರಮ ವ್ಯವಹಾರಗಳಿಗೆ ಆಸ್ಪದ ನೀಡಬೇಡಿ. ಗೋಮಾಳ ಭೂಮಿ ಸರ್ಕಾರದ್ದಾಗಿರುವುದರಿಂದ ಅದರಲ್ಲಿ ಯಾರೂ ಪ್ರವೇಶ ಮಾಡದಂತೆ ಕಂದಾಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು.
ಅವರು ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಲಿತರು ನೀಡಿದ ದೂರಿನ ಮೇರೆಗೆ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.
ಅನಾವಶ್ಯಕವಾಗಿ ರಕ್ಷಣಾ ಇಲಾಖೆ ಅಧಿಕಾರಿಗಳು ಮೊಕದ್ದಮೆಗಳನ್ನು ಹಾಕಬೇಡಿ. ಸೌಹಾರ್ದಯುತವಾಗಿ ನಡೆದುಕೊಳ್ಳಲು ಸೂಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಭೂ ವಿವಾದಗಳು ಹೆಚ್ಚಾಗಿರುತ್ತವೆ. ಪೊಲೀಸ್ ಇಲಾಖೆ ಯಾರ ಪರವಾಗಿ ವಕಾಲತ್ತು ವಹಿಸಬಾರದು. ಉದ್ದೇಶ ಪೂರ್ವಕವಾಗಿ ಮೊಕದ್ದಮೆಗಳನ್ನು ಹಾಕಬೇಡಿ ಎಂದು ತಿಳಿಸಿದರು.
ಚೋಳಘಟ್ಟದಲ್ಲಿ ಗೋಮಾಳ ಭೂಮಿಯನ್ನು ಸೇರಿಸಿಕೊಂಡು ಕಾಂಪೌಂಡ್ ಹಾಕುವುದರಲ್ಲಿ ವಿವಾದ ಉಂಟಾಗಿತ್ತು. ಸ್ಥಳ ಪರಿಶೀಲಿಸಿದ ಸಚಿವರು ಎರಡೂ ಗುಂಪಿನ ರೈತರೊಂದಿಗೆ ಸಮಾಲೋಚಿಸಿ ದಾಖಲೆಗಳನ್ನು ಪರಿಶೀಲಿಸಿ ಅದರಂತೆ ಕ್ರಮ ವಹಿಸಬೇಕೆಂದು ಸಚಿವರು ತಹಶೀಲ್ದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಮುಳಬಾಗಿಲು ಶಾಸಕ ಕೊತ್ತನೂರು ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ, ಎಸ್ಪಿ ಡಾ. ರಾಮ ನಿವಾಸ್ ಸಫಟ್, ತಹಶೀಲ್ದಾರ್ ಸೌಮ್ಯಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement