ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಛಾಯಾಗ್ರಾಹಕರು- ಬ್ಯಾಂಕ್ ಮಧ್ಯೆ ಉತ್ತಮ ಬಾಂಧವ್ಯವಿರಲಿ'

Rashmi Kasaragodu
Updated On : 12 Jul 2013, 12:18 pm

ಕ.ಪ್ರ.ವಾರ್ತೆ   ಗೌರಿಬಿದನೂರು   ಜು. 11
ಬ್ಯಾಂಕುಗಳೊಂದಿಗೆ ಛಾಯಾಗ್ರಾಹಕರು ಉತ್ತಮ ಸಂಬಂಧವನ್ನು ಬೆಳೆಸಿಕೊಂಡಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ರವಿಕುಮಾರ್ ಹೇಳಿದರು.
ಪಟ್ಟಣದ ನದಿದಡದ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಬ್ಯಾಂಕ್‌ಗಳಲ್ಲಿ ಹಲವು ಯೋಜನೆಗಳ ಕುರಿತು ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಛಾಯಾಗ್ರಾಹಕರು ಅಸಂಘಟಿತರಾಗಿದ್ದರು. ಆದರೆ, ಇದೀಗ ಸಂಘಟಿತರಾಗಿ ಹೊರಹೊಮ್ಮುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು.
ಇಂದಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬ ಛಾಯಾಗ್ರಾಹಕರು ಬಂಡವಾಳಕ್ಕಾಗಿ ಮತ್ತೊಬ್ಬರನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಲಭ ದರದ ಬಡ್ಡಿಯ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯುಲು ಸಂಘಟನೆ ಮೂಲಕ ಮುಂದಾಗಿ, ಬ್ಯಾಂಕ್‌ನಿಂದ 50000 ವರೆಗೆ ಒಬ್ಬನಿಗೆ ಜಾಮೀನಿನ ಮೇಲೆ ಸಾಲ ನೀಡಬಹುದು. ಉಳಿದೆಲ್ಲಾ ಯೋಜನೆಗಳಿಗೆ ತನ್ನದೇ ಆದ ಕಾನೂನು ಚೌಕಟ್ಟಿನೊಳಗೆ ವ್ಯವಹರಿಸುವಂತೆ ತಿಳಿಸಿದರು.
ಸಂಘದ ಸದಸ್ಯರೇ ಸ್ವಸಹಾಯ ಗುಂಪುಗಳನ್ನು ಮಾಡಿಕೊಂಡಿ ಉಳಿತಾಯ ಮಾಡುವುದರ ಜೊತೆಗೆ ಬ್ಯಾಂಕ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಸಂಘದ ಅಧ್ಯಕ್ಷ ರಮಣ ಮಾತನಾಡಿ, ಛಾಯಾಗ್ರಾಹಕರು ವೃತ್ತಿ ಕೌಶಲ್ಯದಲ್ಲಿ ಸ್ಪರ್ಧೆ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಪ್ರತಿ ಛಾಯಾಗ್ರಾಕರು ಸಂಘಟಿತರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ರಾಜ್ಯ ಕೆಪಿಎ ಸಂಘದ ಸದಸ್ಯ ಎಸ್.ಎಲ್.ವಿ. ಬಾಬು, ಜಿಲ್ಲಾ ಸಂಘದ ಖಜಾಂಚಿ ಗಿರೀಶ್ ಆರಾಧ್ಯ, ಸದಸ್ಯ ಸುರೇಶ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಿ.ಎಂ. ಅರುಣಕುಮಾರ್, ಗೌರವಾಧ್ಯಕ್ಷ ದೇವಿ ಮಂಜುನಾಥ್, ಕಾರ್ಯದರ್ಶಿ ಮದನ ಗೋಪಾಲ್, ಖಜಾಂಚಿ ಪ್ರದೀಪ್, ಹಿರಿಯ ಛಾಯಾಗ್ರಾಹಕ ಬಾಬು,ಅಂಜಿನಪ್ಪ, ನಾಗರಾಜ್ ಜೈನ್, ಹರೀಶ್, ನಾಗರಾಜ್ ಸೇರಿದಂತೆ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಛಾಯಾಗ್ರಾಹಕರ ಪ್ರಶ್ನೆಗಳಿಗೆ ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರವಿಕುಮಾರ್ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement