ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಲ್ಲಾಳಿಗಳ ದೌರ್ಜನ್ಯ: ಖಂಡನೆ

Rashmi Kasaragodu
Updated On : 12 Jul 2013, 12:18 pm

ಚಿಂತಾಮಣಿ:  ರೈತರ  ಮೇಲೆ ಎಪಿಎಂಸಿ ದಲ್ಲಾಳಿಗಳ ದೌರ್ಜನ್ಯ ಹಾಗೂ ಪೊಲೀಸರ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಗೋಪಿನಾಥ್ ಖಂಡಿಸಿದ್ದಾರೆ.
ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಕಮಿಷನ್ ಏಜಂಟರು ರೈತರಿಂದ ಶೇ.10ರಂತೆ ನಿಯಮ ಬಾಹಿರವಾಗಿ ವಸೂಲಿ ಮಾಡುತ್ತಿರುವ ವಿರುದ್ಧ ಸಹ ಕ್ರಮ ಜರುಗಿಸದ ಸ್ಥಳೀಯ ಎಪಿಎಂಸಿ ಆಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯಲು ಕಾರಣ ಎಂದು ಆರೋಪಿಸಿದರು.
ಪೊಲೀಸರು ಕೂಲಂಕಶವಾಗಿ ವಿಚಾರಣೆ ನಡೆಸದೆ ಎಪಿಎಂಸಿಯ ದಲ್ಲಾಳಿಗಳ ಬಲಾಢ್ಯರ ಕೈಗೊಂಬೆಗಳಾಗಿ ರೈತರ ಮೇಲೆ ಲಾಠಿ ಚಾರ್ಜ್ ನಡೆದು ಅವರನ್ನು ಮನಬಂದಂತೆ ಹಲ್ಲೆ ಮಾಡಿರುವ ಪೊಲೀಸರ ಏಕಪಕ್ಷೀಯ ಧೋರಣೆ ಖಂಡಿಸಿದ್ದಾರೆ. ಸಂಬಂಧಪಟ್ಟ ಮೇಲಾಧಿಕಾರಿಗಳು ರೈತರ ಮೇಲೆ ಹಲ್ಲೆ ನಡೆಯದಂತೆ, ರೈತರಿಗೆ ನ್ಯಾಯಯುತವಾದ ಬಿಲ್ ನೀಡಲು ಮುಂದಾಗಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement