ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೋಧಗಯಾ ದಾಳಿ: ಉಗ್ರರ ಬಂಧನಕ್ಕೆ ಒತ್ತಾಯ

Rashmi Kasaragodu
Updated On : 12 Jul 2013, 12:18 pm

ಕೋಲಾರ: ಬಿಹಾರ ರಾಜ್ಯದ ಬುದ್ದ ಗಯಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣರಾದ ಉಗ್ರರನ್ನು ಬಂಧಿಸಬೇಕೆಂದು ಒತ್ತಾಯಿಸಿ  ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾ ಸಂಚಾಲಕ ದೊಡ್ಡಮಲ್ಲೆ ರವಿಕುಮಾರ್ ನಿಯೋಗದ ಮುಖಂಡತ್ವ ವಹಿಸಿದ್ದರು. ಶಾಂತಿ ಸೌಹಾರ್ದತೆಗೆ ಹೆಸರಾದ ಬುದ್ದ ಗಯಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಖಂಡಿಸಿದ ನಿಯೋಗ ಕೇಂದ್ರ ಸರ್ಕಾರ ಕೂಡಲೇ ಘಟನೆಗೆ ಕಾರಣವಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿತು.
ದೇಶದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್‌ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ರವರಿಗೆ ಮನವಿ ಪತ್ರ ಸಲ್ಲಿಸಿದ ನಿಯೋಗ ಬುದ್ಧ ಗಯಾ ಮೇಲೆ ನಡೆದ ದಾಳಿಯಿಂದ ದೇಶದ ಭದ್ರತಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದು ತಿಳಿಯುತ್ತಿದ್ದು ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ ್ಳಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಕೋಲಾರ ತಾಲೂಕು ಸಂಚಾಲಕ ಮಾರ್ಜೇನಹಳ್ಳಿ ಆರ್.ಮುನಿಸ್ವಾಮಿ, ಬಂಗಾರಪೇಟೆಯ ಕೀಲುಕೊಪ್ಪ ಟಿ.ಯಲ್ಲಪ್ಪ, ಮೂರಾಂಡಹಳ್ಳಿ ರೆಡ್ಡಪ್ಪ, ಮಾರ್ಜೇನಹಳ್ಳಿ ಗಜೇಂದ್ರ, ಎಂ.ಎನ್. ಮಂಜುನಾಥ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement