ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಗಿಯದ ಒಳಚರಂಡಿ ಕಾಮಗಾರಿ; ಸಂಚಾರಕ್ಕೆ ಕಿರಿಕಿರಿ

Rashmi Kasaragodu
Updated On : 12 Jul 2013, 12:22 pm

ಕ.ಪ್ರ.ವಾರ್ತೆ   ಮಾಲೂರು   ಜು. 11
ಪಟ್ಟಣದಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಒಳಚರಂಡಿ ಕಾಮಗಾರಿ ಪೂರ್ಣವಾಗಿ ಸಾರ್ವಜನಿಕರ ಉಪಯೋಗಕ್ಕೆ ಇನ್ನೂ ಬರದಿದ್ದರೂ, ಪುರಸಭೆಯ ನಿರ್ಲಕ್ಷ್ಯದಿಂದ ನಗರದ ರಸ್ತೆಗಳ ಮಧ್ಯ ಭಾಗದಲ್ಲಿ ಮಾತ್ರ ರಸ್ತೆಯ ಮೂರನೇ ಚರಂಡಿ ರೀತಿಯಲ್ಲಿ ನಿರ್ಮಾಣವಾಗಿ ಜನತೆ ಸಂಚರಿಸಲು ಅಸಾಧ್ಯವಾದ ಸ್ಥಿತಿಬಂದೊದಗಿದೆ.
ಕಳೆದ 2009-10 ರಂದು 22 ಕೋಟಿ ರು. ವೆಚ್ಚದ ಒಳಚರಂಡಿ ಕಾಮಗಾರಿಗೆ ಅಂದಿನ ಶಾಸಕ ಕೃಷ್ಣಯ್ಯ ಶೆಟ್ಟಿ ಚಾಲನೆ ನೀಡಿದ್ದರು. ಅದು ಕುಂಟುತ್ತ ಸಾಗಿದ ಹಿನ್ನೆಲೆಯಲ್ಲಿ ಹೊಸದಾಗಿ ನಿಮಾರ್ಣವಾದ ಹೊಸ ಬಡಾವಣೆಗಾಗಿ ಯೋಜನೆಗೆ ಹೆಚ್ಚುವರಿಯಾಗಿ 2 ಕೋಟಿ ರು. ಮಂಜೂರಾಗಿತ್ತು. ಆದರೆ ಇದುವರೆಗೂ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿದ್ದರೂ, ಸಂಸ್ಕರಣ ಘಟಕಕ್ಕೆ ನಿವೇಶನ ಸಿಗದೆ ಒಳಚರಂಡಿ ಕಾಮಗಾರಿ ನಿಂತುಹೋಗಿದೆ. ಕಾಮಗಾರಿಗೆ ಹಣ ವಿಳಂಬವಾಗಿ ಬಂದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ನಿಧಾನ ಗೊಳಿಸಿದ ಗುತ್ತಿಗೆದಾರನಿಗೆ ಕಾಮಗಾರಿ ವೆಚ್ಚ ಹೆಚ್ಚಾಗಿ ಹೋಗಿತ್ತು. ಇದರಿಂದ ನಾಮಕಾಸ್ತೆಯಾಗಿ ರಸ್ತೆಯ ಹಳ್ಳವನ್ನು ಮುಚ್ಚಿದ ಗುತ್ತಿಗೆದಾರನಿಗೆ ಪುರಸಭೆಯು ತನ್ನ ಜಾಣ ಕುರುಡುತನ ಪ್ರದರ್ಶಿಸಿ ಸಹಕರಿಸಿತ್ತು.ಒಳ ಚಂರಡಿಯ ಈ ಒಳ ಒಪ್ಪಂದವೇ ಈಗ ಜನತೆ ಪಟ್ಟಣದ ರಸ್ತೆಗಳಲ್ಲಿ ಓಡಾಡಲು ಅಸಾಧ್ಯವಾಗುರ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ರಸ್ತೆಗಳು ಒಂದು ಸಣ್ಣ ಮಳೆಗೆ ಸಣ್ಣ-ಸಣ್ಣ ಕುಂಟೆಗಳಾಗಿ ಮಾರ್ಪಡುತ್ತಿದೆ.
ಡೆಸ್ಕ್‌ಸ್ಲಾಬ್‌ಗಳಲ್ಲಿ ರಂಧ್ರಗಳು ಮೂಡುತ್ತಿವೆ.ಈ ಬಗ್ಗೆ ಪುರಸಭೆ ಅಭಿಯಂತರ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದ ಪಟ್ಟಣದ ಜನತೆ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನಾದರೂ ಪಟ್ಟಣದಲ್ಲಿ ಹಳ್ಳ ಬಿದ್ದಿರುವ ರಸ್ತೆ-ಬೆಳಗದೆ ತಿಂಗಳಿಂದ ಕೆಟ್ಟು ನಿಂತಿರುವ ಜೋಡಿ ರಸ್ತೆ ದೀಪಗಳನ್ನು ಸರಿಪಡಿಸಿ ಜನತೆಗೆ ಸುಗುಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement