ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯ
ಕ.ಪ್ರ.ವಾರ್ತೆ ಟಿ ಮುಳಬಾಗಲು ಟಿ ಜು.11
ಎರಡು ದಶಕಗಳಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಒತ್ತಾಯಿಸಿ ಸರ್ಕಾರಕ್ಕೆ ಹಲವಾರು ಸಂಘ ಸಂಸ್ಧೆಗಳು ಮಾಡಿದ ಪ್ರಯ್ನ ವಿಫಲವಾಗಿದೆ ಎಂದು ಆರೋಪಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಮೆರವಣೆಗೆ ನಡೆಸಿ ನಂತರ ತಾಲೂಕು ಕಚೇರಿ ಮುಂದೆ ಧರಣೆ ನಡೆಸಿದರು.
ಸಮುದ್ರಕ್ಕೆ ಹರಿಯುವ ನೀರನಲ್ಲಿ ಶೇ.30ರಷ್ಚು ನೀರು ಯೋಜನೆಗಳ ಮೂಲಕ ತಂದರೂ ಬಯಲುಸೀಮೆ ರೈತರ ನೀರಾವರಿ ಕೊರತೆ ತುಂಬುವುದು, ಬಯಲುಸೀಮೆ ಜಿಲ್ಲೆಗಳ ಕೆರೆಗಳ ಅಭಿವೃದ್ಧಿಗೆ ಬರುವ ನೂರಾರು ಕೋಟಿ ರು. ವ್ಯರ್ಥ ಮಾಡದೇ ಕೆರೆಗಳ ಅಭಿವೃದ್ಧಿಗೆ ಸೀಮಿತಗೊಳಿಸಲು ಹಾಗೂ ಕೆರೆಗಳ ಅಭಿವೃದ್ಧಿ ಹಣ ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು, ರೈತರ ಎಲ್ಲಾ ಸಾಲ ಮನ್ನಾ ಮಾಡಿ ಹೊಸ ಸಾಲ ನೀಡಲು ಕೋರಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ. ಸಂಚಾಲಕ ರಂಜಿತ್‌ಕುಮಾರ್, ಚಲಂ, ಸಾಗರ್, ಕೆ.ವಿನೋದ್‌ಕುಮಾರ್, ವಿಕ್ರಮರಾಜ್, ಶಿವಶಂಕರ್, ಗೊಟ್ಟುಕುಂಟೆ ಕೃಷ್ಣ, ಶಿವಶಂಕರ್, ಕನ್ನತ್ತ ಶ್ರೀನಾಥ್ ಭಾಗವಹಿಸಿದ್ದರು.