5ನೇ ದಿನವೂ ಪೌರ ನೌಕರರ ಪ್ರತಿಭಟನೆ
ಗುಡಿಬಂಡೆ: 5 ದಿನಗಳಿಂದ ವೇತನ ನೀಡಿ ಎಂದು ಧರಣಿ ನಡೆಸುತ್ತಿರುವ ಪೌರ ಕಾರ್ಮಿಕರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದೆ. ವೇತನ ನೀಡುವವರೆಗೆ ನೌಕರರು ತಮ್ಮ ಕರ್ವವ್ಯ ನಿರ್ವಹಿಸಲು ಮುಂದಾಗದಿರಲು ನಿಶ್ಚಯಿಸಿದ್ದಾರೆ. ಪಟ್ಟಣದಲ್ಲಿ ಎಲ್ಲೆಡೆ ಕಸದ ರಾಶಿಗಳು ಕಾಣುತ್ತಿವೆ. ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ದೂರು
ಕೆಜಿಎಫ್: ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪತಿ ವಿರುದ್ಧ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾರಿಕುಪ್ಪಂ ಪೊಲೀಸ್ ಠಾಣೆ ವ್ಯಾಪ್ತಿಯ ಮೈಸೂರು ಹಾಲ್ ಬಡಾವಣೆ ನಿವಾಸಿ ಕುಮಾರ್ ಎಂಬಾತ ಮುಳಬಾಗೀಲು ತಾಲೂಕಿನ ಇಂದುಶ್ರೀ ಅವರನ್ನು 2 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ ಇಂದುಶ್ರೀಳ ಪೋಷಕರು ಚಿನ್ನದ ಒಡವೆಗಳು, 60000 ನಗದು ಸೇರಿದಂತೆ ಇತರೆ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿದ್ದರು.
ಆದರೆ ಗಂಡ ಹಾಗೂ ಅವರ ಮನೆಯವರು ಇನ್ನು 2 ಲಕ್ಷ ವರದಕ್ಷಿಣೆ ತರುವಂತೆ ಆಗಾಗ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ತನ್ನನ್ನು ಕೊಲ್ಲಲು ಮುಂದಾಗಿದ್ದರು ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.