ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಳ್ಳಬಟ್ಟಿ ಸಾರಾಯಿ ದಂಧೆಗೆ ಕಡಿವಾಣ ಹಾಕಲು ಒತ್ತಾಯ

Rashmi Kasaragodu
Updated On : 13 Jul 2013, 12:47 pm

ಶ್ರೀನಿವಾಸಪುರ:  ತಾಲೂಕಿನ ಆಂಧ್ರಪ್ರದೇಶದ ನಗಡಿ ಭಾಗಗಳಾದ ರಾಯಲ್ಪಾಡು ಹೋಬಳಿಯ ಹಾಗೂ ರೋಣೂರು ಹೋಬಳಿಯ ಕೆಲ ಗ್ರಾಮಗಳಲ್ಲಿ ಅಕ್ರಮ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ. ಆದರೆ, ಅಬಕಾರಿ ಇಲಾಖೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನಾಗರೀಕರು ಆರೋಪಿಸಿದ್ದಾರೆ.
ಕಳ್ಳಭಟ್ಟಿ ಸಾರಾಯಿಗೆ ಕಡಿವಾಣ ಹಾಕಲು ಸರ್ಕಾರಗಳು ನಾನಾ ರೀತಿಯ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆದರೆ, ಈ ತಾಲೂಕಿನ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಘಟಕಗಳು ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಕೆಲ ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು ಇವುಗಳನ್ನು ನಡೆಸುತ್ತಿದ್ದಾರೆ. ಇದರಿಂದ ಇಡೀ ತಾಲೂಕಿಗೆ ಕಳ್ಳಭಟ್ಟಿ ಸಾರಾಯಿ ಅಕ್ರಮವಾಗಿ ಸರಬರಾಜು ಮಾಡಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಇದ್ದಕ್ಕೆ ಸಂಬಂಧಪಟ್ಟ ಅಬಕಾರಿ ಇಲಾಖೆಯವರನ್ನು ಪ್ರಶ್ನಿಸಿದಾಗ ಈ ತಾಲೂಕಿನ ಕಳ್ಳಭಟ್ಟಿ ಸಾರಾಯಿ ವಾಸನೆ ಇಲ್ಲದಂತೆ ಮಾಡಿದ್ದೇವೆ ಎಂದು ಹೇಳುತ್ತಿರುತ್ತಾರೆ. ರಾಯಲ್ಪಾಡು ಹೋಬಳಿಯ ಕೂರಿಗೇಪಲ್ಲಿ, ಮುದಿಮಡುಗು, ಸುಣ್ಣಕಲ್ ಹಾಗೂ ರೋಣೂರು ಹೋಬಳಿಯ ಸೋಮಯಾಜಲಹಳ್ಳಿ, ಕನ್ನಂಪಲ್ಲಿ, ಕಾರಂಗಿ, ಯಮ್ಮನೂರು ಹಾಗೂ ಇನ್ನು ಇತರೆ ಗ್ರಾಮಗಳಲ್ಲಿ ಕಳ್ಳಭಟ್ಟಿ  ಸಾರಾಯಿ ದಂಧೆ ಯಥೇಚ್ಛವಾಗಿ ನಡೆಯುತ್ತಿದೆ. ಕಳೆದ 3-4 ವರ್ಷಗಳ ಹಿಂದೆ ಕಳ್ಳಭಟ್ಟಿ ಸಾರಾಯಿಯನ್ನು ಕುಡಿದು ಅಮ್ಮಗಾರಿಪೇಟೆಯ ಬಳಿ 5 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯವರು ಎಚ್ಚೆತ್ತು ಈ ದಂಧೆ ನಿಗ್ರಹಿಸಲು ಕಠಿಣ ಕ್ರಮ ಜರುಗಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.


ಇವರೇನಂತಾರೆ...?

ಸಿದ್ದರಾಮಯ್ಯ ಅವರಿಗೆ ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದೆ. ಆದರೂ, ಬಜೆಟ್ನಲ್ಲಿ  ಮಾತ್ರ ತಮ್ಮ ಕನಸುಗಳನ್ನು ಸಾಕಾರಗೊಳ್ಳಲು ಬಿಡದೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿರುವುದು ಸ್ಪಷ್ಟವಾಗಿದೆ.  
ಟಿ  ಜಿ.ರಾಮರಾಜು, ಜೆಡಿಎಸ್ ಮುಖಂಡ


ಬಡವರು, ರೈತರು ನೆಮ್ಮದಿಯಾಗಿ ಬದುಕಲು ಪೂರಕವಾದ ಬಜೆಟ್ ಮಂಡಿಸಿ ದ್ದಾರೆ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ 1 ಸಾವಿರ ಕೋಟಿ ಪ್ರಕಟಿಸಿರುವುದು ಸಂತಸ ತಂದಿದೆ.
ಟಿ  ಅನಿಲ್ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ



ಸ್ತ್ರೀ ಶಕ್ತಿ ಸಂಘಗಳ ಆವರ್ತ ನಿಧಿಯನ್ನು 25 ಸಾವಿರಕ್ಕೆ ಹೆಚ್ಚಿಸಿರುವುದು, ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆ, ಘೋಷಣೆಗಳು ಕೇಳುವುದಕ್ಕೆ ಇಂಪಾಗಿವೆ.  
ಟಿ ಚೌಡೇಶ್ವರಿ ರಾಮಚಂದ್ರ, ಜಿಪಂ ಅಧ್ಯಕ್ಷರು, ಕೋಲಾರ



ಈ ಬಜೆಟ್ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ತಮ್ಮ ಹೈಕಮಾಂಡ್ ತೃಪ್ತಿಪಡಿಸಲು ಮಂಡಿಸಿರುವ ಓಟ್ ಬ್ಯಾಂಕ್ ಆಜೆಂಡಾ ರೀತಿ ಕಾಣುತ್ತಿದೆ.
ಟಿ  ಸಿ.ಜಿ.ಮುರಳಿ, ಲೋಕಾಸತ್ತ ಮುಖಂಡ


ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು 2 ಪ್ರೋತ್ಸಾಹ ಧನ ನೀಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಸರ್ಕಾರದ ಲೆಕ್ಕಾ ಪಕ್ಕಾ ಇಲ್ಲದಿದ್ದರೆ ಶಿಕ್ಷಣದ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತದೆ.
ಟಿ ಡಾ.ಪ್ರಸನ್ನಕುಮಾರಿ, ಕಾನೂನು ಉಪನ್ಯಾಸಕಿ



ಮುಖ್ಯಮಂತ್ರಿ ಅವರು ರಾಜ್ಯದ ಎಲ್ಲಾ ವರ್ಗದ ಜನರ ಹಿತ ಗಮನದಲ್ಲಿಟ್ಟುಕೊಂಡು ಸಮತೋಲನ ಬಜೆಟ್  ಮಂಡಿಸಿದ್ದಾರೆ.
ಟಿ  -ಡಾ.ಕೆ.ಸುಧಾಕರ್,ಶಾಸಕರು, ಚಿಕ್ಕಬಳ್ಳಾಪುರ


ಅನವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಜನಪರ ಕಾರ್ಯಕ್ರಮ ಘೋಷಿಸಲಾಗಿದೆ. ಅಲ್ಲದೆ, ಜನರ ಆಶಯ ತಿಳಿದುಕೊಂಡು ಮಂಡಿಸಿರುವ ಬಜೆಟ್ ಆಗಿದೆ.
ಟಿ  ಎನ್.ಹೆಚ್.ಶಿವಶಂಕರರೆಡ್ಡಿ, ಶಾಸಕರು

ಇದು ನಿರಾಶದಾಯಕ ಬಜೆಟ್, ಈ ಹಿಂದೆ ಬಜೆಟ್ಗಳಲ್ಲೂ ಎತ್ತಿನಹೊಳೆ ಯೋಜನೆಗೆ ಹಣವನ್ನು ಮೀಸಲಿಡಲಾಗಿತ್ತು.
ಟಿ  ಎಂ.ರಾಜಣ್ಣ, ಶಾಸಕರು, ಶಿಡ್ಲಘಟ್ಟ

ಎತ್ತಿನಹೊಳೆ ಯೋಜನೆಗೆ ಈ ಹಿಂದಿನ ಬಜೆಟ್ಗಳಲ್ಲಿ ಮೀಸಲಿಟ್ಟ ಹಣಕ್ಕಿಂತ ಹೆಚ್ಚಿಗೆ ಹಣವನ್ನು, ಜತೆಗೆ ಪರಮಶಿವಯ್ಯ ವರದಿಗಾಗಿ ಹಣ ಮೀಸಲಿಡಲಾಗಿದೆ.
ಟಿ  ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು, ಬಾಗೇಪಲ್ಲಿ.

ನೀರಾವರಿ ಯೋಜನೆ ವಿಷಯಕ್ಕೆ ಸಂಬಂಧಪಟ್ಟಂತೆ, ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಒಂದು ಸಾವಿರ ಕೋಟಿ ರುಪಾಯಿ ಮೀಸಲಿಟ್ಟಿರುವುದು ಸ್ವಾಗತಾರ್ಹ.  
ಟಿ  ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು,


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement