ಖಾಸಗಿ ಬಸ್ ಸಿಬ್ಬಂದಿ ಮಾರಾಮಾರಿ
ಕನ್ನಡಪ್ರಭ ವಾರ್ತೆ, ಚಿಂತಾಮಣಿ, ಜು.12
ಎರಡು ಖಾಸಗಿ ಬಸ್ಸುಗಳ ಸಿಬ್ಬಂದಿ ಮಧ್ಯೆ ಮಾರಾಮಾರಿ ನಡೆದ ಪರಿಣಾಮ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಚಾರ್ಜ್ ನಡೆಸಿರುವ ಘಟನೆ ಪಟ್ಟಣದ ಜೋಡಿ ರಸ್ತೆ ಬಳಿ ಶುಕ್ರವಾರ ಸಂಜೆ ನಡೆದಿದೆ.
ಪಟ್ಟಣದ ಖಾಸಗಿ ಬಸ್ಸಿನ ಮಾಲೀಕ ನಾಸೀರ್ ಹಾಗೂ ಹೊಸಕೋಟೆಯ ಎಸ್ಕೆಎಸ್ ಬಸ್ಸಿನ ಮಾರ್ಗದ ಪರ್ಮಿಟ್ ಹೊಂದಿರುವ ಮಾಲೀಕನಿಗೂ ಬಸ್ ಬಿಡುವ ಸಮಯದ ಕುರಿತಂತೆ ಜಗಳ ಉಂಟಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಪರಿಸ್ಥಿತಿ ಕಳೆದ 2 ದಿನಗಳಿಂದ ಪಟ್ಟಣದಲ್ಲಿ ನಡೆಯುತ್ತಿತ್ತು. ಶುಕ್ರವಾರ ಸಂಜೆ 2 ಗುಂಪುಗಳು ಏಕಾಏಕಿ ಜಟಾಪಟಿಯಾಗಿ ಮಾರಾಮಾರಿ ನಡೆಯಿತು. ಇದರಿಂದ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡು ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಸಬ್ ಇನ್ಸ್ಪೆಕ್ಟರ್ ಮುರಳಿ ಹಾಗೂ ಸಿಬ್ಬಂದಿ ಮಾರಾಮಾರಿ ನಡೆಯುತ್ತಿದ್ದ ಗುಂಪಿನ ಮೇಲೆ ಲಾಠಿ ರುಚಿ ತೋರಿಸಿ ಗುಂಪನ್ನು ಚದುರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
'ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿ'
ಸರ್ವೆ ಕಾರ್ಯ ಮಧ್ಯಾಹ್ನದ ವೇಳೆಗೆ ಮುಗಿದು ಹಿಂತಿರುವ ಕೆಲವೇ ನಿಮಿಷಗಳ ಮುನ್ನ ಗ್ರಾಮದ ಜೆಡಿಎಸ್ನ ಗೋವಿಂದರೆಡ್ಡಿ ಎಂಬವರು ರಾಜಕೀಯ ದುರುದ್ದೇಶದಿಂದ ವಿನಾಕಾರಣ ಕೆಪಿಸಿಸಿ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ನಂದನವನ ಶ್ರೀರಾಮರೆಡ್ಡಿ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ತಾಲೂಕು ದಂಡಾಧಿಕಾರಿಗಳ ಸಮಕ್ಷದಲ್ಲೇ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಲು ಮುಂದಾದಾಗ 2 ಗುಂಪುಗಳು ಸಮಾಧಾನಗೊಳಿಸಿ ಪರಸ್ಪರ ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು 2 ಕಡೆಯ ಮುಖಂಡರಾದ ಅನುಂಪಲ್ಲಿ ಕೃಷ್ಣಾರೆಡ್ಡಿ ಹಾಗೂ ಬುರುಡಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರ್ಥಸಾರಥಿ ಜನರಿಗೆ ಮನವಿ ಮಾಡಿದರು.