ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮನೆ ಬೀಗ ತೆಗೆದು ಚಿನ್ನಾಭರಣ ಕಳವು

Rashmi Kasaragodu
Updated On : 13 Jul 2013, 12:48 pm

ಕೆಜಿಎಫ್: ಬೀಗ ಹಾಕಿದ್ದ ಮನೆಗೆ ನಕಲಿ ಬೀಗದ ಕೀಲಿಯಿಂದ ತೆರೆದು ಮನೆಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
 ಬೆಮೆಲ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಮಾಡಲ್ ಹೌಸ್ ಕೋರಮಂಡಲ್ ನಿವಾಸಿ ಇಮಾನ್ಯುಲ್ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದು ಮಾರನೆ ದಿನ ರಾತ್ರಿ 9 ಗಂಟೆಗೆ ಬಂದು ನೋಡಿದಾಗಿ ಮನೆಗೆ ಹಾಕಿದ್ದ ಬೀಗಕ್ಕೆ ಯಾವುದೋ ನಕಲಿ ಕೀಲಿ ಬಳಸಿ ತೆರೆದಿದ್ದು ಒಳಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 20 ಸಾವಿರ ಬೆಲೆ ಬಾಳುವ ಚಿನ್ನದ ಒಡವೆಗಳು ಮತ್ತು 2500 ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಇಮಾನ್ಯುಲ್ ಬೆಮೆಲ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement