ಮರಳುಗಾರಿಕೆ ಅಡ್ಡೆ ಮೇಲೆ ದಾಳಿ
ಮುಳಬಾಗಿಲು: ತಾಲೂಕಿನ ಕಸಬಾ ಹೋಬಳಿಯ ಕೆಲವು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದವರಿಂದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡಕ್ಕೆ ಹಲವಾರು ಹೊಸ ವಿಷಯಗಳು ಕಂಡು ಬಂದವು.
ತಾಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿ ಗುಡಿಸಲು ಒಳಗೆ ಹೋಗಿ ಪರಿಶೀಲಿಸಿದಾಗ ಅದೊಂದು ವೈಭವಯುತವಾದ ಗುಡಿಸಲು. ಅಲ್ಲಿ ಮರಳು ವ್ಯವಹಾರ ನಡೆಯುತ್ತಿತೆಂದು ಮನಗಂಡ ಕಂದಾಯ ಅಧಿಕಾರಿಗಳ ತಂಡ ಗುಡಿಸಲಿಗೆ ಬೆಂಕಿ ಇಟ್ಟು ನಾಶಪಡಿಸಿತು. ಮತ್ತೆ ಪದ್ಮಘಟ್ಟ ಖಾಸಗಿ ವ್ಯಕ್ತಿಯೊಬ್ಬರ ಹೊಲದ ಬಳಿ ಕಂದಾಯ ಇಲಾಖೆಯ ತಂಡ ನೋಡಿದ ಅಕ್ರಮ ಮರಳುಗಾರರು ಜೆಸಿಬಿ ಸ್ಧಳದಲ್ಲಿಯೇ ಬಿಟ್ಟು ಪರಾರಿಯಾದರು. ಅದನ್ನು ಪರಿಶೀಲಿಸಿದ ನಂತರ ಟ್ಯೂಬಿನ ಗಾಳಿ ಬಿಟ್ಟರು. ಮತ್ತೊಂದು ಜೆಸಿಬಿ ಯಂತ್ರವನ್ನು ಅಣ್ಣಿಹಳ್ಳಿ ಗ್ರಾಮದ ಕೆರೆಯ ಬಳಿ ವಶಪಡಿಸಿಕೊಳ್ಳಲಾಯಿತು. ತಹಸೀಲ್ದಾರ್ ಡಿ.ವಿ.ರಾಮಮೂರ್ತಿ, ಕಂದಾಯ ನಿರೀಕ್ಷಕ ವೆಂಕಟೇಶ್, ಟೆ.ಸಿ. ಕೃಷ್ಣಪ್ಪ, ವೆಂಕಟರಾಮೇಗೌಡ, ಅಲಂಗೂರು ನಾಗರಾಜ್, ಚಂದ್ರಶೇಖರ್ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.