ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವಾಹಿತ ಮಹಿಳೆ ಆತ್ಮಹತ್ಯೆ

Rashmi Kasaragodu
Updated On : 13 Jul 2013, 12:46 pm

ಮುಳಬಾಗಲು:  ಪಟ್ಟಣದ ಮುತ್ಯಾಲಪೇಟಿ ಕಾಮಾಕ್ಷಿ ದೇವಾಲಯ ರಸ್ತೆಯಲ್ಲಿ ವಾಸವಾಗಿರುವ ಅಂಬಿಕಾ (24) ಎಂಬವರು ಗುರುವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
   ತಾಲೂಕಿನ ಬೈರಕೂರು ಸಮೀಪದ ಯಲುವಹಳ್ಳಿಯ ಮಂಜುನಾಥ್ ಎಂಬವರು 2 ವರ್ಷಗಳ ಹಿಂದೆ ಅದೇ ಗ್ರಾಮದ ಅಂಬಿಕಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ 13 ತಿಂಗಳ ಕಾರ್ತೀಕ್ ಎಂಬ ಮಗುವಿದೆ. ಅಂಬಿಕಾ ರಾತ್ರಿ ವೇಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿಯೆಲ್ಲಾ ಮಗು ಅತ್ತರೂ ಯಾರು ಗಮನಿಸಿಲ್ಲ.
  ಶುಕ್ರವಾರ ಬೆಳಿಗ್ಗೆ ಮತ್ತೆ ಮಗು ಅತ್ತಾಗ ಅಕ್ಕಪಕ್ಕದ ಮನೆಯವರು ಕಿಟಕಿ ತೆಗೆದು ನೋಡಿದಾಗ ಅಂಬಿಕಾ ಮೃತಪಟ್ಟಿದ್ದರು. ಮೃತಳ ತಾಯಿ ಲಕ್ಷ್ಮದೇವಮ್ಮ ನೀಡಿದ ದೂರಿನ ಮೇಲೆ ಮುಳಬಾಗಲು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement