ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹರ್ಷ
ಕೋಲಾರ: ರಾಜ್ಯ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಮುಂದಾಗಿರುವುದಕ್ಕೆ ಕೋಲಾರ ಜಿಲ್ಲಾ ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಕಲಾವಿದ ವಿಷ್ಣು ರವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ವಿಶ್ವಕರ್ಮರ ಬಹುದಿನಗಳ ಹೋರಾಟಕ್ಕೆ ಪ್ರತಿಫಲ ಎನ್ನುವಂತೆ ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಐದು ಕೋಟಿ ರೂಗಳನ್ನು ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.
ವಿಶ್ವಕರ್ಮ ಜನಾಂಗದ ಶ್ರೀ ಗುರು ಶಿವಸುಜ್ಞಾನಮೂರ್ತಿ ಸ್ವಾಮೀಜಿಸಹ ಸರ್ಕಾರದ ನಿರ್ಧಾರದಿಂದ ಹರ್ಷಚಿತ್ತರಾಗಿದ್ದು, ನಿಗಮ ಮಂಡಳಿ ರೂಪು ರೇಷೆಗಳನ್ನು ಸಿದ್ದಪಡಿಸಲು ಎಲ್ಲ ವಿಶ್ವಕರ್ಮರು ಚರ್ಚಿಸಿ ವಿಶ್ವಕರ್ಮರ ಅಭ್ಯುದಯಕ್ಕೆ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಪಂಚ ಕಸುಬುಗಳ ಕುಲಭಾಂದವರಿಗೂ ನಿಗಮದಲ್ಲಿ ಸೂಕ್ತ ಪ್ರಾತಿನಿದ್ಯ ಕಲ್ಪಿಸಿಕೊಳ್ಳಬೇಕೆಂದು ಸಲಹೆ ಇತ್ತಿದ್ದಾರೆಂದು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಎನ್. ಬ್ರಹ್ಮಾಚಾರಿ, ವಿಶ್ವಕರ್ಮ ಮುಖಂಡರಾದ ಗೌರಿಬಿದನೂರು ರಾಧಾಕೃಷ್ಣ, ಪ್ರಭಾಕರಾಚಾರ್, ನಂದನ್ಕುಮಾರ್, ಕುಮಾರ್ ಶಂಕರ್, ಗಿರಿಶೇಖರಾಚಾರಿ, ರಾಮಕೃಷ್ಣಾಚಾರಿ, ಮೋಹನಾಚಾರಿ, ಗೌರಿಶಂಕರ್, ಶ್ರೀಧರ್ ಮತ್ತಿತರರು ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.