ಸುದ್ದಿ ಸಂಕ್ಷೇಪ
ತಾಲೂಕು ಮಟ್ಟದ ವಾಚನಾಭಿರುಚಿ ಸ್ಪರ್ಧೆ 27ಕ್ಕೆ
ಕೋಲಾರ: ಬಾಲಲೀಲಾ ಸಮಿತಿಯಿಂದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವಾಚನಾಭಿರುಚಿ ಸ್ಪರ್ಧೆಯನ್ನು ಇದೇ ಜುಲೈ 27 ರಂದು ಶನಿವಾರ ತಾಲೂಕಿನ ವಿವಿಧ ಶಾಲೆಗಳಲ್ಲಿ ನಡೆಸಲಾಗುತ್ತಿದೆ.
ಪ್ರತಿ ಶಾಲೆಯಲ್ಲಿ 5,6 ಮತ್ತು 7ನೇ ತರಗತಿಯ ಮಕ್ಕಳು ತಮಗೆ ಇಷ್ಟವಾದ ವಿಚಾರಗಳ ಕುರಿತು ಪ್ರಬಂಧ ಬರೆದು ಸ್ಪರ್ಧಾ ಸಂಚಾಲಕರಿಗೆ ತಲುಪಿಸಬೇಕು, ಇದನ್ನು ಬಾಲಲೀಲಾ ಸಮಿತಿಯು ತೀರ್ಪುಗಾರರಿಂದ ಪರಿಶೀಲನೆ ಮಾಡಿಸಿ ಕನ್ನಡದ 6 ಮಂದಿ ಹಾಗೂ ಇಂಗ್ಲೀಷ್ ಭಾಷೆಯ 6 ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರಕಟಿಸಲಿದೆ ಎಂದು ಸಲಹಾ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಸಿ.ಆರ್. ರಾಘವೇಂದ್ರರಾವ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ.ಸಂ.9481310437, 9448697070 ಸಂಪರ್ಕಿಸಲು ಕೋರಲಾಗಿದೆ.
ದಸಂಸ ಜಿಲ್ಲಾಪದಾಧಿಕಾರಿಗಳ ಆಯ್ಕೆ
ಕೋಲಾರ: ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕರಾದ ಅಣ್ಣಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ರಾಯಲ್ ಲಾಡ್ಜ್ ಸಭಾಂಗಣದಲ್ಲಿ ಇತ್ತೀಚೆಗೆ ಸಮಿತಿ ಸಭೆ ನಡೆದು ಕೋಲಾರ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿಗೆ ಜಿಲ್ಲಾ ಸಂಚಾಲಕರಾಗಿ ದೊಡ್ಡಮಲ್ಲೆ ರವಿಕುಮಾರ್, ಸಂಘಟನಾ ಸಂಚಾಲಕರಾಗಿ ಹೀರೇಕರಪನಹಳ್ಳಿ ವಿ.ಯಲ್ಲಪ್ಪ, ರಾಯಸಂದ್ರ ಸುಬ್ರಮಣಿ, ವಿ.ಕಾರ್ತಿಕ್, ಖಜಾಂಚಿಯಾಗಿ ಕೆಸರನಹಳ್ಳಿ ರಾಮಕೃಷ್ಣ, ಸಾಂಸ್ಕೃತಿಕ ವಿಭಾಗಕ್ಕೆ ಮೂರಾಂಡಹಳ್ಳಿ ಚಿಕ್ಕರೆಡ್ಡಪ್ಪರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೋಲಾರ ತಾಲೂಕು ಸಮಿತಿಗೆ ಸಂಚಾಲಕರಾಗಿ ಮಾರ್ಜೇನಹಳ್ಳಿ ಆರ್.ಮುನಿಸ್ವಾಮಿ, ಸಂಘಟನಾ ಸಂಚಾಲಕರಾಗಿ ಗೋಪಾಲಕೃಷ್ಣ, ಕೆ.ಎಸ್.ಕಾರ್ತಿಕ್, ಬಾಬು, ಖಜಾಂಚಿಯಾಗಿ ಗಜೇಂದ್ರರವರನ್ನು ಆಯ್ಕೆ ಮಾಡಲಾಗಿದೆ.
ಬಂಗಾರಪೇಟೆ ತಾಲೂಕು ಸಮಿತಿಗೆ ಸಂಚಾಲಕರಾಗಿ ಕೀಲುಕೊಪ್ಪ ಯಲ್ಲಪ್ಪ, ಸಂಘಟನಾ ಸಂಚಾಲಕರಾಗಿ ಹೀರೇಕರಪನಹಳ್ಳಿ ಮುನಿರಾಜು, ನಾರಾಯಣಪುರ ಚಂದ್ರಪ್ಪ, ಅತ್ತಿಗೆರೆಕೊಪ್ಪ ಸುಬ್ರಮಣಿ, ಖಜಾಂಚಿಯಾಗಿ ಮಾಗೇರಿ ಸುಬ್ರಮಣಿ, ಕಲಾಮಂಡಳಿ ವಿಭಾಗಕ್ಕೆ ವಿ.ನಾಗಪ್ಪರವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.