ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

22ರಂದು ಸರ್ಕಾರಿ ನೌಕರರ ಸಂಘದ ಚುನಾವಣೆ ಅಧಿಸೂಚನೆ

Mainashree
Updated On : 16 Jul 2013, 12:26 pm

ಹೊಸಕೋಟೆ:  ಸರಕಾರಿ ನೌಕರರ ಸಂಘದ ಬೆಂಗಳೂರು ಗ್ರಾಮಂತರ ಜಿಲ್ಲಾ ಮತ್ತು ತಾಲೂಕು ಶಾಖೆಯ 2013-18ನೇ ಸಾಲಿಗೆ ಚುನಾವಣೆ ನಡೆಸಲು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರಕಾರಿ ನೌಕರರ ಜಿಲ್ಲಾ ಸಂಘದ ಸಂಘಾಟನಾ ಕಾರ್ಯದರ್ಶಿ ಶ್ರೀಕಾಂತ್  ತಿಳಿಸಿದ್ದಾರೆ.  
ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾವಣಾ  ವೇಳಾಪಟ್ಟಿ: ನಾಮ ಪತ್ರಗಳನ್ನು ಜುಲೈ 11 ರಿಂದ 15ರಸಂಜೆ 4.00 ಗಂಟೆಗೆ ವಿತಹರಣೆ ಮಾಡಲಾಗುವುದು. ನಾಮಪತ್ರ ಸಲ್ಲಿಸಲು ಜುಲೈ15 ರ ಸಂಜೆ 5ಗಂಟೆಗೆ ಕೊನೆಯ ದಿನವಾಗಿದೆ. ನಾಮಪತ್ರಗಳನ್ನು ಜುಲೈ15 ರ ಸಂಜೆ 5ಗಂಟೆಯ ನಂತರ ಪರಿಶೀಲಿಸಲಾಗುವುದು.
ಅರ್ಹ ಅಭ್ಯರ್ಥಿಗಳ ಹೆಸರು ಜುಲೈ15 ರಂದು ನಾಮಪತ್ರಗಳನ್ನು ಪರಿಶೀಲನೆ  ನಂತರ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ಜುಲೈ16 ರ ಸಂಜೆ 4ಗಂಟೆಗೆ  ನಾಮಪತ್ರಗಳನ್ನು ವಾಪಸ್ಸು ಪಡೆಯಲು ಕೊನೆಯ ದಿನವಾಗಿದ್ದು.  ಚುನಾವಣೆ ಜುಲೈ 22 ಸೋಮವಾರ ಬೆಳಗ್ಗೆ 11ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು ಜುಲೈ22ರ ಸಂಜೆ 4.30ರ ನಂತರ ಮತಗಳ ಎಣಿಕೆ ನಡೆಯಲ್ಲಿದೆ. ಮತಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement