ಅಬಕಾರಿಸಚಿವರಿಗೆ ಮನವಿ
ಮಾಲೂರು: ಇಲ್ಲಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನಿಯೋಗ ಅಬಕಾರಿ ಮಂತ್ರಿ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಈ ಹಿಂದೆ ಕಳ್ಳಭಟ್ಟಿಯಲ್ಲಿ ನಿರತರಾದವರಿಗೆ ಬಾರ್ ಲೈಸೆನ್ಸ್ ನೀಡುವ ಮೂಲಕ ಪುನರ್‌ವಸತಿ ಕಲ್ಪಿಸಿಕೊಡಬೇಕೆಂಬ ಮನವಿ ಪತ್ರ ಅರ್ಪಿಸಿದರು.
ಮಹಾಸಭಾದ ಅಧ್ಯಕ್ಷ ಸಂಚಿಕೆ ನಾರಾಯಣಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಈ ಹಿಂದೆ ಕಳ್ಳಭಟ್ಟಿ ನಡೆಸುತ್ತಿದ್ದ ಹಿಂದುಳಿದ ವರ್ಗ ಹಾಗೂ ಎಸ್‌ಸಿಎಸ್‌ಟಿ ವರ್ಗದವರಿಗೆ ರಾಜ್ಯ ಸರ್ಕಾರವು ಇದುವರೆಗೂ ಪುನರ್ ವಸತಿ ನಿರ್ಮಿಸಿಕೊಡಲಿಲ್ಲ. 1997 ರ ನಂತರ ಇದುವರೆಗೂ ರಾಜ್ಯ ಸರ್ಕಾರ ಮದ್ಯದಂಗಡಿಗೆ ಪರವಾನಗಿ ಸಹ ನೀಡಿಲ್ಲ. ಈಗ ಸರ್ಕಾರ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಶೇ.20, ಪರಿಶಿಷ್ಟ ಪಂಗಡ 0.5 ಹಾಗೂ ಹಿಂದುಳಿಂದ ವರ್ಗ ಶೇ.20 ಹಾಗೂ ಅಲ್ಪಸಂಖ್ಯಾತರಿಗೆ ಶೇ.5 ರಷ್ಟು ಮೀಸಲಿಟ್ಟು ಸಾಮಾಜಿಕ ನ್ಯಾಯ ದೂರಕಿಸಿಕೊಡಬೇಕಾಗಿ ವಿನಂತಿಸಿದರು. ಮನವಿ ಸ್ವೀಕರಿಸಿದ ಸತೀಶ್ ಜಾರಕಿಹೊಳಿರವರು ಈಗ ವಿಧಾನ ಮಂಡಲ ನಡೆಯುತ್ತಿದ್ದು, ಅಲ್ಲಿ ಚರ್ಚಿಸುವ ಜತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದರು.