ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಪಂ ಸದಸ್ಯನ ಮೇಲೆ ಹಲ್ಲೆ ಸುದ್ದಿ ಸುಳ್ಳು; ಸ್ಪಷ್ಟೀಕರಣ

Rashmi Kasaragodu
Updated On : 16 Jul 2013, 1:22 am

ಚಿಂತಾಮಣಿ: ಎರಡು ಗುಂಪುಗಳ ನಡುವೆ ಮಾತಿನ ಚಕಮುಖಿ ನಡೆದು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲೇ ಹಾಲಿ ಜಿಪಂ ಸದಸ್ಯನ ಮೇಲೆ ಹಲ್ಲೆ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆಯೆಂದು ಜಿಪಂ ಸದಸ್ಯ ನಂದನವನ ಶ್ರೀರಾಮರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ. ತಾಲೂಕಿನ ಚಿಲಕಲನೇರ್ಪು ಹೋಬಳಿಯ ದಿಗವ ಬಸವಾಪುರದ ವಕ್ಕಲಿಗ ಸಮುದಾಯಕ್ಕೆ ಸೇರಿದ ಈಶ್ವರರೆಡ್ಡಿ ಬಿನ್ ಗೋವಿಂದರೆಡ್ಡಿ ಎಂಬವರಿಗೂ ಇದೇ ಗ್ರಾಮದ ಬಲಜಿಗ ಸಮುದಾಯದ ಮಲ್ಲಪ್ಪ ಎಂಬವರಿಗೂ ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿನ 2 ಎಕರೆ 6 ಕುಂಟೆ ಗ್ರಾಮಠಾಣಾ ಸರ್ಕಾರಿ ಜಮೀನು ತಗಾದೆಯಲ್ಲಿತ್ತು. ಈ ಭಾಗದ ಜನಪ್ರತಿನಿಧಿಯಾಗಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಹೋಗಿದ್ದೆ. ಸಣ್ಣ ಪುಟ್ಟ ಗಲಾಟೆ ನಡೆದಿದ್ದು ನಿಜ. ಆದರೆ ನನ್ನ ಮೇಲೆ ಹಲ್ಲೆ ನಡೆದಿಲ್ಲವೆಂದು ಜಿಪಂ ಸದಸ್ಯ ನಂದನವನ ಶ್ರೀರಾಮರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement