ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಗೌರಿಬಿದನೂರು: ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ತಾಲೂಕಿನ ಗೌಡಸಂದ್ರ ಸ.ಕಿ.ಪ್ರಾ.ಶಾಲೆಯ ಶಿಕ್ಷಕ ರೆಡ್ಡಪ್ಪ, ಹುಸೇನ್ಪುರ ಶಾಲೆಯ ಶಿಕ್ಷಕ ರಾಂಬಾಬು, ಮಂಚೇನಹಳ್ಳಿ ಹಿ.ಪ್ರಾ.ಶಾಲೆಯ ಶಿಕ್ಷಕ ಜನಾರ್ಧನ ಮೂರ್ತಿ, ವೇದಲವೇಣಿ ಹಿ.ಪ್ರಾ.ಶಾಲೆಯ ಶಿಕ್ಷಕ ಮಂಜುನಾಥ್.ಎನ್.ಆರ್. ನಾಮಪತ್ರ ಸಲ್ಲಿಸಿದರು. ಜೂ.22 ರಂದು ನಡೆಯಲಿರುವ ಸರಕಾರಿ ನೌಕರರ ಸಂಘದ ಚುನಾವಣೆಗೆ ನಾಮಪತ್ರವನ್ನು ಹಿಂಪಡೆಯಲು ಜೂ.16 ಕೊನೆಯ ದಿನವಾಗಿದೆ, ಶಿಕ್ಷಕರಾದ ರಾಮಾಂಜಿನಪ್ಪ, ಪ್ರಸಾದ್, ನರಸಿಂಹರಾವ್, ಆಶೋಕ್, ಸುವರ್ಣಮ್ಮ, ರಾಮಚಂದ್ರ, ಕೆ.ಸಿ.ವಿಶ್ವೇಶ್ವರಯ್ಯ, ಎನ್.ಕೆ.ಪ್ರಸಾದ್ ಸುಭಾನ್, ಪುಟ್ಟಲಿಂಗಯ್ಯ, ಪಿ.ಜಿ.ಯತೀಶ್, ಡಿ.ವೆಂಕಟರಾಮಯ್ಯ, ಶ್ರೀನಿವಾಸ್,ಟಿ.ಎನ್.ಲಕ್ಷ್ಮಿನರಸಪ್ಪರವರು ಹಾಜರಿದ್ದರು.