'ಪಕ್ಷಭೇದ ಮರೆತರೆ ಬಲಿಜ ಸಮಾಜ ಬಲಿಷ್ಟ'
ಚಿಂತಾಮಣಿ: ಸಮುದಾಯದ ಕುಲಬಾಂಧವರು ಪಕ್ಷಭೇದ ಮರೆತು ಜನಾಂಗದ ಮೂಲ ಸೌಲಭ್ಯ ಚಿಂತನೆ ಬಗ್ಗೆ ಹೆಚ್ಚು ಆದ್ಯತೆ ನೀಡಿದಲ್ಲಿ ಬಲಿಜ ಸಮಾಜವು ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಸಮಾಜ ಸೇವಕ ಹಾಗೂ ಮುಖಂಡರಾದ ನರೇಶ್ಕುಮಾರ್ ಹೇಳಿದರು. ಅವರು ಪಟ್ಟಣದ ನಕ್ಕುಂದಿ ಪೇಟೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಬಲಿಜ ಜನಾಂಗದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಲಿಜ ಸಮಾಜದ ಮುಖಂಡರಾದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಕಾರ್ಯದರ್ಶಿ ನಾಗರಾಜು,ಚೊಕ್ಕನಹಳ್ಳಿ ರವಿ ಸೇರಿದಂತೆ ನೂರಾರು ಕುಲಬಾಂಧವರು ಭಾಗವಹಿಸಿದ್ದರು.