ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮನೆ ಹಿಂಬಾಗಿಲ ಮುರಿದು ಚಿನ್ನಾಭರಣ ಕಳವು

Rashmi Kasaragodu
Updated On : 16 Jul 2013, 1:22 am

ಕ.ಪ್ರ.ವಾರ್ತೆ   ಕೆಜಿಎಫ್   ಜು. 15
ಮನೆ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವರ್ಣನಗರದ 3ನೇ ಅಡ್ಡ ರಸ್ತೆಯ ನಿವಾಸಿ ಸುರೇಶ್‌ರೆಡ್ಡಿ ಎಂಬುವರು ಗೋಮಾಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಶಾಲೆಯಿಂದ ಬಂದ ನಂತರ ತಮ್ಮ ಪತ್ನಿ ಮಗುವೊಂದಿಗೆ ಸ್ವಂತ ಊರಾದ ದೊಡ್ಡಬಲುವಹಳ್ಳಿ ಗ್ರಾಮಕ್ಕೆ ಹೋಗಿದ್ದರು.
ಮಾರನೇ ದಿನ ಭಾನುವಾರ ಸಂಜೆ ಮನೆಗೆ ಹಿಂತಿರುಗಿದ್ದು ಮನೆಯ ಮುಂಬಾಗೀಲನ್ನು ತೆರೆಯಲು ಆಗದ ಕಾರಣ ಬೀಗ ರಿಪೇರಿ ಮಾಡುವವರನ್ನು ಕರೆಸಿ ಬಾಗಿಲನ್ನು ತೆಗೆದು ಮನೆಯೊಳಗೆ ಹೋಗಿ ನೋಡಿದಾಗ ಮನೆಯಲ್ಲಿದ್ದ ವಸ್ತುಗಳು, ಮತ್ತು ಬೀರುವಿನ ಲಾಕರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಅಡುಗೆ ಕೊಣೆ ಬಾಗೀಲು ತೆರೆದಿತ್ತು. ಮನೆ ಹಿಂಬಾಗಿಲನ್ನು ಮುರಿದು ಅಡುಗೆ ಕೊಣೆಯ ಮೂಲಕ ಬೆಡ್ ರೂಂ. ಒಳಗೆ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 100 ಗ್ರಾಂ. ಚಿನ್ನದ ಒಡವೆಗಳು, ಅರ್ಧ ಕೆಜಿ ಬೆಳ್ಳಿ ಆಭರಣಗಳು, 20 ಸಾವಿರ ನಗದು ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿಕಟೋಚ್ ಸಫೆಟ್, ವೃತ್ತ ನಿರೀಕ್ಷಕ ಟಿ.ಸಿ. ವೆಂಕಟೇಶ್, ಭೋಟಿ ನೀಡಿದ್ದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲಿಸಿದರು. ಸುರೇಶ್‌ರೆಡ್ಡಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ರಾಬರ್ಟ್‌ಸನ್‌ಪೇಟೆ ಠಾಣಾ ಪಿಎಸ್‌ಐ ರಾಜಣ್ಣ ಮುಂದಿನ ತನಿಖೆ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement