ಮಹಿಳಾ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಮರು ನೇಮಕ
ಕ.ಪ್ರ.ವಾರ್ತೆ ಕೋಲಾರ ಜು. 15
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಅಧ್ಯಕ್ಷರಾಗಿ ನಡುಪಳ್ಳಿ ಕೃಷ್ಣಮೂರ್ತಿ ಮರು ನೇಮಕಗೊಂಡಿದ್ದಾರೆ. ಶಾಸಕ ವರ್ತೂರು ಪ್ರಕಾಶ್ ಅವರು ಕೃಷ್ಣಮೂರ್ತಿ ಅವರನ್ನು ಈ ಹಿಂದಿನ ಅವಧಿಯಲ್ಲೂ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದರು.
ಮಹಿಳಾ ಕಾಲೇಜನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಕೃಷ್ಣಮೂರ್ತಿ ಸೇವೆ ಮೆಚ್ಚಿ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ವರ್ತೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲಿ ಎಂದು ಆಶಿಸಿದ್ದಾರೆ.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾಗಿ ಜಿ.ಪಂ ಸದಸ್ಯ ಅಮರನಾಥ್, ವಿ.ಕೃಷ್ಣ, ಕೆ.ಎನ್. ಪ್ರಕಾಶ್, ಸಿ. ಗೋವಿಂದರಾಜು, ಅಲ್ಲಾ ಬಕಾಷ್, ಶ್ಯಾಂಸುಂದರ್, ನಾಗೇಶ್ ಗೌಡ, ನಾರಾಯಣಸ್ವಾಮಿ, ಹೂಹಳ್ಳಿ ಸುರೇಶ್, ಮಹಿಳಾ ಪ್ರತಿನಿಧಿಯಾಗಿ ಜಿ. ಮಂಜುಳಾ ಅವರನ್ನು ಆಯ್ಕೆ ಮಾಡಲಾಗಿದೆ.