ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವೃತ್ತಿ ತೆರಿಗೆ ಪಾವತಿಗೆ ವಿರೋಧಿಸಿ ಪ್ರತಿಭಟನೆ

Rashmi Kasaragodu
Updated On : 16 Jul 2013, 1:22 am

ಕ.ಪ್ರ.ವಾರ್ತೆ   ಕೆಜಿಎಫ್   ಜು. 15
ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ವಿಶ್ವಕರ್ಮ ಚಿನ್ನದ ಅಂಗಡಿಗಳಲ್ಲಿ  ಕೆಲಸ ಮಾಡುವ ಕಾರ್ಮಿಕರು ವಾರ್ಷಿಕ 1 ಸಾವಿರ ವೃತ್ತಿ ತೆರಿಗೆ ಕಟ್ಟಬೇಕು ಎಂದು ನೋಟೀಸ್ ನೀಡಿರುವುದನ್ನು ವಿರೋಧಿಸಿ ವಿಶ್ವಕರ್ಮ ಸಂಘದ 350ಕ್ಕೂ ಹೆಚ್ಚು ಕಾರ್ಯಕರ್ತರು  ನಗರದ ವಾಣಿಜ್ಯ ತೆರಿಗೆ ಇಲಾಖೆಯ ಮುಂದೆ ಧರಣಿ ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ವಿಶ್ವಕರ್ಮ ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡುವವರೆಲ್ಲರೂ ಆಭರಣಗಳ ತಯಾರಿಕೆಯಿಂದ ಬರುವ ಕೂಲಿಯಿಂದ ಜೀವನ ಸಾಗಿಸುತ್ತಿದ್ದಾರೆ ಅಲ್ಲದೆ ಈ ವೃತ್ತಿ ತಮ್ಮ ವಂಶಪಾರಂಪರೆಯಾಗಿ ಮಾಡಿಕೊಂಡು ಬರುತ್ತಿದ್ದು ಇದರಿಂದ ಬರುವ ಹಣದಲ್ಲಿ ತಮ್ಮ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಇತರೆ ಖರ್ಚುಗಳನ್ನು ನಿಭಾಯಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಕರ್ಮ ಕಾರ್ಮಿಕರಿಗೆ ವೃತ್ತಿ ತೆರಿಗೆ ದೊಡ್ಡ ಹೊರೆಯಾಗಿರುವುದರಿಂದ ಅಧಿಕಾರಿಗಳು ಈ ನೋಟೀಸನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ವೈ. ಸಂಪಂಗಿ ಹಾಗೂ ನಗರಸಭೆ ಸದಸ್ಯ ವಿಜಯಕುಮಾರ್ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಅಶೋಕ್ ಜಟ್ಟೆಣ್ಣವರ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅಧಿಕಾರಿ ಅಶೋಕ್ ಜಟ್ಟೆಣ್ಣವರ್ ಸರ್ಕಾರ 2003ರಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿ ವೃತ್ತಿಯಲ್ಲಿ ತೊಡಗಿರುವವರು ತಮ್ಮ ಅಂಗಡಿಯಲ್ಲಿ 5 ಕಾರ್ಮಿಕರು ಕೆಲಸ ಮಾಡಿದರೆ ವಾರ್ಷಕ್ಕೆ 1000 ತೆರಿಗೆ ಕಟ್ಟಬೇಕು, 5-10 ಮಂದಿ ಕೆಲಸ ಮಾಡಿದೆ 1500, 10ಕ್ಕೂ ಮೇಲ್ಪಟ್ಟು ಕೆಲಸ ಮಾಡಿದಲ್ಲಿ ವಾರ್ಷಿಕ ತೆರಿಗೆ 2500 ವೃತ್ತಿ ತೆರಿಗೆ ಕಟ್ಟಬೇಕು ಎಂದು ಅನುಮೊದನೆ ಹೊರಡಿಸಿದ್ದೆ. ಸರ್ಕಾರದ ಆದೇಶದಂತೆ ಪ್ರತಿಯೊಬ್ಬರು ಇದನ್ನು ಪಾಲಿಸಬೇಕಾಗುತ್ತದೆ. ಆದರೆ ತಮ್ಮ ಇಲಾಖೆ ವತಿಯಿಂದ ವೃತ್ತಿ ತೆರಿಗೆ ಈಗ ಕಟ್ಟಬೇಕು ಎಂದು ನೋಟೀಸ್ ನೀಡಿಲ್ಲ ತಮ್ಮ ಅಂಗಡಿಯ ಮತ್ತು ಕಾರ್ಮಿಕರ ಬಗ್ಗೆ ದಾಖಲಾತಿಗಳನ್ನು 10 ದಿನದೊಳಗೆ ಸಲ್ಲಿಸಬೇಕು ಎಂದು ತಿಳಿಸಿರುವುದಾಗಿ ಸ್ಪಷ್ಟನೆ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ವೈ. ಸಂಪಂಗಿ ಕಾರ್ಮಿಕರಿಗೆ ಹೆಚ್ಚಿನ ಆದಾಯವೇನು ಬರುವುದಿಲ್ಲ ಸಂಕಷ್ಟದ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಹಲವಾಸು ಸಮಸ್ಯೆಗಳು ಇರುವುದರಿಂದ ತಾವುಗಳು ಹೆಚ್ಚಿನ ಕಾಲವಕಾಶ ಕಲ್ಪಿಸಿಕೊಡಬೇಕು ಮತ್ತು ಈ ಅನುಮೋದನೆಯ ಕುರಿತು ಎಲ್ಲಾ ವಿಶ್ವಕರ್ಮ  ಕಾರ್ಮಿಕರಿಗೆ ಅರಿವು ಮತ್ತು ಮಾಹಿತಿ ನೀಡಲು ಸಭೆಯನ್ನು ಕರೆದು ನಂತರ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರಿಂದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಅಶೋಕ್ ಜಟ್ಟೆಣ್ಣವರ್ ಒಪ್ಪಿಗೆ ಸೂಚಿಸಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ  ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮನೋಜ್, ಮಾಜಿ ಅಧ್ಯಕ್ಷ ರಾಮಕೃಷ್ಣಾಚಾರಿ, ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement