ವೈದೇಹಿ ಆಸ್ಪತ್ರೆ ವೈದ್ಯರಿಂದ ಉಚಿತ ತಪಾಸಣಾ ಶಿಬಿರ
ಶ್ರೀನಿವಾಸಪುರ: ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಯೋಜನೆಯಡಿಯಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಹಲವಾರು ರೀತಿಯ ಕಾಯಿಲೆಗಳಿಗೆ ಉಚಿತವಾಗಿ ತಪಾಸಣಾ ಶಿಬಿರವನ್ನು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಹೃದಯ ಕಾನ್ಸರ್, ನರಗಳ ದೌರ್ಬಲ್ಯ, ಮೂತ್ರ ಪಿಂಡ, ಪ್ಲಾಸ್ಟಿಕ್ ಸರ್ಜರಿಗೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಗ್ರಾಮಗಳ 100 ಹೆಚ್ಚು ಮಂದಿ ಒಳ ರೋಗಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು. ಕಾಯಿಲೆಗಳಿರುವವರನ್ನು ಬೆಂಗಳೂರಿನ ವೈದೇಹಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯರುಗಳಿಂದ ಶಸ್ತ್ರ ಚಿಕಿತ್ಸೆ ಮಾಡಿ ಗುಣಮುಖರನ್ನಾಗಿ ಮಾಡಲಾಗುತ್ತದೆಂದು ವೈದ್ಯರು ತಿಳಿಸಿದರು. ಡಾ. ಮುಸ್ತಾಫ್, ಡಾ. ನವೀನ್ಕುಮಾರ್, ಡಾ. ದಿನೇಶ್ ಮಿಶ್ರಾ, ಡಾ.ಖಲೀಲ್ ಮಹಮದ್ ಖಾನ್ ಹಾಗೂ 7 ಮಂದಿ ಇತರೆ ಸಿಬ್ಬಂದಿ ಆಗಮಿಸಿದ್ದರು.