ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಿ ಲಂಚ ಕೇಳಿದರೆ ಶಾಸಕರ ಗಮನಕ್ಕೆ ತನ್ನಿ

Rashmi Kasaragodu
Updated On : 17 Jul 2013, 12:18 pm

ಟೇಕಲ್: ಮಾಲೂರು ತಾಲೂಕಿನಲ್ಲಿ ಬದಲಾವಣೆ ತರಬೇಕೆಂದು ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ವರ್ಗ  ಲಂಚ ಕೇಳುತ್ತಿದ್ದು ಇದಕ್ಕೆ ಕಡಿವಾಣ ಹಾಕಲೆಂದು ಶಾಸಕ ಮಂಜುನಾಥಗೌಡರು ಅಧಿಕಾರಿ ವರ್ಗದ ಸಭೆ ಕರೆದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅಧಿಕಾರಿ ಲಂಚ ಕೇಳಿದರೆ ಶಾಸಕರ ಗಮನಕ್ಕಾಗಲಿ ಇಲ್ಲವೆ ಸ್ಥಳೀಯ ಮುಖಂಡರ ಗಮನಕ್ಕೆ ತರಬೇಕೆಂದು ಟೇಕಲ್ ಜಿಪಂ ಕ್ಷೇತ್ರದ ಸದಸ್ಯೆ ರತ್ನಮ್ಮ ನಂಜೇಗೌಡರು ತಿಳಿಸಿದರು. ಅವರು ಟೇಕಲ್ನ ಕೆ.ಜಿ.ಹಳ್ಳಿ ಗ್ರಾ.ಪಂ ಗ್ರಾಮಸಭೆಯ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಿದ್ದರು.
ಊರಗುರ್ಕಿ ಗ್ರಾಮಕ್ಕೆ ವಾರದಲ್ಲಿ ಕೊಳವೆ ಬಾವಿ ಕೊರೆಸಿ ನೀರು ಕೊಡಲಾಗುವುದು ಎಂದರು. ಸಭೆಯಲ್ಲಿ ಮಾಜಿ ತಾಪಂ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಎಚ್. ಹನುಮಂತಪ್ಪ, ತಾ.ಪಂ ಸದಸ್ಯೆಯರಾದ ಮಂಜುಳ ವೆಂಕಟೇಶ್, ನಿರ್ಮಲ ಆಂಜಿನಪ್ಪ, ಮುಖಂಡ ಟೇಕಲ್ ಆಂಜಿನಪ್ಪ ಮುಂತಾದವರು ಗ್ರಾಮ ಸಭೆ ಕುರಿತು ಮಾತನಾಡಿದರು.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್ ವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷೆ ಅಲುಮೇಲು ಮಂಗಮ್ಮ, ಆರ್. ಮಂಜುಳ, ಪದ್ಮಾಶ್ರೀರಾಮ್, ವಿನೋದ್ಗೌಡ,  ರಮೇಶ್, ನಾರಾಯಣಸ್ವಾಮಿ, ಸಿ. ವೆಂಕಟೇಶ್, ವೆಂಕಟೇಶಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಮುನಿಯಪ್ಪ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೆಚ್.ಜಿ. ಗೋವಿಂದೆಗೌಡ, ಕಾರ್ಯದರ್ಶಿ ಗೋಪಾಲ್ ಮುಂತಾದವರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement