ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನರ ಹಿತಕ್ಕಾಗಿ ಬೆಂಬಲ ನೀಡಿ: ವರ್ತೂರ್

Rashmi Kasaragodu
Updated On : 17 Jul 2013, 12:55 pm

ಕೋಲಾರ: ರಾಜಕಾರಣ ಅಂದರೆ ದಿನದ 24 ಗಂಟೆ ಸ್ವಾರ್ಥಕ್ಕಾಗಿ ಕುತಂತ್ರ ಮಾಡುವುದಲ್ಲ, ಜನತೆಯ ಹಿತಕ್ಕಾಗಿ ಶ್ರಮಿಸುವುದೇ ನಿಜವಾದ ರಾಜಕಾರಣ, ಕ್ಷೇತ್ರದ ಅಭಿವೃದ್ಧಿ ಮತ್ತು ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದೇ ನನ್ನ ಪ್ರಮುಖ ಅಜೆಂಡಾ ಆಗಿದ್ದು ವಿರೋಧಿಗಳೂ ಇದನ್ನು ಅರ್ಥ ಮಾಡಿಕೊಂಡು ಜನತೆಯ ಹಿತಕ್ಕಾಗಿ ನನ್ನೊಂದಿಗೆ ಕೈ ಜೋಡಿಸಬೇಕೆಂದು ಶಾಸಕ ವರ್ತೂರು ಪ್ರಕಾಶ್ ಮನವಿ ಮಾಡಿದರು.
ನಗರದ 13ನೇ ವಾರ್ಡ್‌ನ ಪಿ.ಸಿ. ಬಡಾವಣೆಯ 4ನೇ ಕ್ರಾಸಿನಲ್ಲಿ ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಭೂಮಿ ಪೂಜೆ ನೆರವೇರಿಸಿದ ಅವರು, ಈ ಭಾಗದ ಜನತೆ ಮನವಿ ಮೇರೆಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಜನತೆ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕ್ಷೇತ್ರದ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬುದು ನನ್ನ ಸಂಕಲ್ಪ ಮತ್ತು ಅದನ್ನು ಈಡೇರಿಸಲು ಕಳೆದ 5 ವರ್ಷಗಳಲ್ಲಿ ಮಾಡಿದ ಪರಿಶ್ರಮವೇ ಎರಡನೇ ಬಾರಿ ಶಾಸಕನಾಗಲು ಜನತೆ ಆಶೀರ್ವಾದ ಮಾಡಿದ್ದಾರೆಂದು ಅಭಿಪ್ರಾಯಪಟ್ಟರು.
ನಾಗರೀಕರ ಹಿತಕ್ಕಾಗಿ ವಿರೋಧ ಪಕ್ಷದವರು ಮುಂದೆಯೂ ಕೈ ಚಾಚುವುದಕ್ಕೆ ಸಿದ್ಧ, ಜಾತಿ ಮತ್ತು ಸ್ವಾರ್ಥ ರಾಜಕಾರಣವನ್ನು ಬದಿಗಿಟ್ಟು ಕೆಲಸ ಮಾಡಿದರೆ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂದು ವಿರೋಧಿಗಳಿಗೆ ಕಿವಿಮಾತು ಹೇಳಿದರು.
ಪಿಸಿ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಯೂ ಆಗಿರುವ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ. ಗೋಪಿನಾಥ್ ಜನತೆಯ ಪರವಾಗಿ ಶಾಸಕರ ಜತೆ ಚರ್ಚಿಸಿದ ಫಲವಾಗಿ ಹೊಸ ಕೊಳವೆ ಬಾವಿಯ ಭಾಗ್ಯ ಸಿಕ್ಕಿದೆ. ಸುಮಾರು 1100 ಅಡಿಗಳದ ಕೊಳವೆ ಬಾವಿಯಲ್ಲಿ ಸುಮಾರು 3 ಸಾವಿರ ಗ್ಯಾಲನ್ ನೀರು ಸಿಕ್ಕಿದ್ದು, ಜನತೆ ನೀರಿನ ಸದ್ಬಳಕೆ ಮಾಡಿಕೊಂಡಲ್ಲಿ ಅನುಕೂಲವಾಗುತ್ತದೆ. ನಗರಸಭೆ ಮಾಜಿ ಅಧ್ಯಕ್ಷ ಸಿ. ರಘುರಾಂ, ಸದಸ್ಯರಾದ ರಾಧಾಕೃಷ್ಣ ಮತ್ತು ಸೋಮಶೇಖರ್, ಮಾಜಿ ಸದಸ್ಯ ಕೆ.ಎಂ.ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕ ಜಂಭಾಪುರ ವೆಂಕಟರಾಮ್, ತ್ಯಾಗರಾಜ್ ಮುದ್ದಪ್ಪ, ವಾರ್ಡ್‌ನ ಮುಖಂಡರಾದ ಬೆಸ್ಕಾಂ ಜಯರಾಜ್, ಪಿ. ರಮೇಶ್, ಕೆ. ವಿಜಯಕುಮಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement