ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೆಂಡರ್ ಬಳಿಕವೇ ಕಾರ್ಮಿಕರಿಗೆ ಬಾಕಿ ವಿಆರ್‌ಎಸ್ ಬಡ್ಡಿ ಹಣ: ದಿವಾಕರನ್

Rashmi Kasaragodu
Updated On : 17 Jul 2013, 12:54 pm


ಕೆಜಿಎಫ್: ವಿಶ್ವದಲ್ಲಿರುವ 900ಕ್ಕೂ ಹೆಚ್ಚು ಚಿನ್ನದ ಗಣಿಗಳ ಆಡಳಿತ ಮಂಡಳಿಗಳ ಪೈಕಿ ಯಾರಾದರೂ ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾರ್ಮಿಕರಿಗೆ ನೀಡಬೇಕಾದ ಬಾಕಿ ವಿಆರ್‌ಎಸ್ ಬಡ್ಡಿ ಹಣ ದೊರೆಯುತ್ತದೆ ಎಂದು ಭಾರತ್ ಚಿನ್ನದ ಗಣಿಯ ಎಲ್ಲಾ ಕಾರ್ಮಿಕರ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ದಿವಾಕರನ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟ್ ಚಿನ್ನದ ಗಣಿ ಪ್ರಕರಣಕ್ಕೆ ಐತಿಹಾಸಿಕ ತೀರ್ಪು ನೀಡಿದೆ. ಇದರಿಂದಾಗಿ ಚಿನ್ನದ ಗಣಿ ಕಾರ್ಮಿಕರ ಬದುಕು ಹಸನಾಗಲಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೈಗೊಂಡ 2006ರ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನ ಸಹಕಾರಿಯಾಗಲಿದೆ ಎಂದರು.
 ಟೆಂಡರ್ ಪ್ರಕ್ರಿಯೆ ಮುಂದಿನ ತಿಂಗಳು ಪ್ರಾರಂಭವಾಗಲಿದ್ದು ಜನವರಿ ತಿಂಗಳೊಳಗೆ ಮುಗಿಯಲಿದ್ದು ಮುಂದಿನ ವರ್ಷ ಏಪ್ರೆಲ್ ತಿಂಗಳ ಹೊತ್ತಿಗೆ ಚಿನ್ನದ ಗಣಿ ಪುನರಾರಂಭವಾಗಲಿದೆ ಎಂದು ದಿವಾಕರನ್ ತಿಳಿಸಿದರು.
ಕಾರ್ಮಿಕ ಸಂಘಟನೆಯ ಮುಖಂಡರಾದ ಮಿಲಿಂದ್, ಕೆ.ರಾಜೇಂದ್ರನ್, ನಾರಾಯಣಸ್ವಾಮಿ, ಚಾರ್ಲ್ಸ್, ಚಂದ್ರಶೇಖರ್, ನಟರಾಜನ್, ಜಯರಾಂ, ಸೆಲ್ವರಾಜ್ ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement