ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೈಕ್ಷಣಿಕ ಪ್ರಗತಿಯಲ್ಲಿ ದಲಿತರ ಅಭಿವೃದ್ಧಿ

Rashmi Kasaragodu
Updated On : 17 Jul 2013, 12:19 pm

ಚಿಂತಾಮಣಿ: ಶೈಕ್ಷಣಿಕವಾಗಿ ಮುಂದುವರಿದಲ್ಲಿ ಮಾತ್ರ ದಲಿತರು ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ದಲಿತ ಸಂಘರ್ಷ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಆನಂದ್ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ದಲಿತ ಸಂಘರ್ಷ ಸೇನೆ ತಾಲೂಕು ಪದಾಧಿಕಾರಿಗಳ ಆಯ್ಕೆ ನಂತರ ಸಭೆ ಉದ್ದೇಶಿಸಿ ಮಾತನಾಡಿದರು. ಹಳ್ಳಿಯಿಂದ ಪಟ್ಟಣದವರೆಗೂ ಸಂಘಟನೆಯನ್ನು ಬಲಪಡಿಸಲು ಹಂತ ಹಂತವಾಗಿ ಸಂಘಟನೆ ರೂಪರೇಷೆಗಳ ಬಗ್ಗೆ ಜನರಿಗೆ ಅರಿವು ನೀಡುತ್ತಾ, ದಲಿತರು ತಮ್ಮ ಮಕ್ಕಳನ್ನು ಕಾರ್ಮಿಕರಾಗಿ ಬಳಿಸಿಕೊಳ್ಳದೆ ಕಡ್ಡಾಯವಾಗಿ ಶಿಕ್ಷಣದ ಬಗ್ಗೆ ಹೆಚ್ಚು ಒಲವು ತೋರಿಸಬೇಕೆಂದು ನುಡಿದರು.  ಸೇನೆಯ ಜಿಲ್ಲಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಅಧ್ಯಕ್ಷರಾಗಿ ಸಿ.ಎನ್.ಆಂಜಪ್ಪ, ಉಪಾಧ್ಯಕ್ಷರಾಗಿ ಮುನಿವೆಂಕಟಪ್ಪ, ಜಿ.ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಮತ್ತು ಪದಾಧಿಕಾರಿಗಳನ್ನಾಗಿ ಕೆ.ಎಂ.ಶ್ರೀನಿವಾಸ್, ಮಂಜು, ಕೃಷ್ಣಪ್ಪ, ಲಕ್ಷ್ಮಣ್ ಗಜಾನನ ವೃತ್ತ ಆಯ್ಕೆ ಮಾಡಲಾಯಿತು.
ತಾಲೂಕು ಮಹಿಳಾ ದಲಿತ ಸಂಘರ್ಷ ಸೇನೆಯ ಪದಾಧಿಕಾರಿಗಳಾಗಿ ಮುನಿವೆಂಕಟಲಕ್ಷ್ಮಮ್ಮ, ನಾಗರತ್ನ, ಚನ್ನಮ್ಮ, ಆಂಜಮ್ಮ, ಸಮಂತಮ್ಮ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹರೆಡ್ಡಿ, ಎಂ.ಎಸ್.ಶಂಕರ್, ಐಮರೆಡ್ಡಹಳ್ಳಿ ನಾರಾಯಣಸ್ವಾಮಿ, ನರಸಮ್ಮ,ಜಯಮ್ಮ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement