ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಹಕರಿಗೆ ಶಾಕ್ ನೀಡಿದ ಕೆಜಿಎಫ್ ಬೆಸ್ಕಾಂ

Rashmi Kasaragodu
Updated On : 18 Jul 2013, 1:02 am

ಕ.ಪ್ರ.ವಾರ್ತೆ   ಕೆಜಿಎಫ್   ಜು. 17
ನಗರದ ಬೆಸ್ಕಾಂ ಇಲಾಖೆ ನೀಡಿದ ವಿದ್ಯುತ್ ಬಿಲ್ನ್ನು ನೋಡಿ ಗ್ರಾಹಕರೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದಂತಾಗಿದೆ.
ಕೆಜಿಎಫ್ನ ಬೆಸ್ಕಾಂ ಇಲಾಖೆ ವತಿಯಿಂದ ಹಳೆಯ ಮೀಟರ್ಗಳನ್ನು ಬದಲಾಯಿಸಿ ನೂತನ ವಿದ್ಯೂತ್ಕರಣ ಮೀಟರ್ಗಳನ್ನು ಅಳವಡಿಸುವ ಕಾರ್ಯಕ್ಕೆ ನಗರದ ಎಲ್ಲಾ 35 ವಾರ್ಡ್ಗಳಲ್ಲಿ ಚಾಲನೆ ನೀಡಿತ್ತು. ಕಳೆದ 5-6 ತಿಂಗಳಿಂದ ನಡೆಯುತ್ತಿರುವ ಈ ನೂತನ ವಿದ್ಯುದ್ದೀಕರಣ ಮೀಟರ್ ಅಳವಡಿಕೆಯಿಂದ ಬೆಸ್ಕಾಂ ಇಲಾಖೆ ವತಿಯಿಂದ ಯಾವುದೇ ಮಾಸಿಕ ವಿದ್ಯೂತ್ ಬಿಲ್ಗಳು ನೀಡುತ್ತಿರಲಿಲ್ಲ. ಇದರಿಂದ ಗೊಂದಲಕ್ಕೊಳಗಾದ ಗ್ರಾಹಕರು ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದರು ಮತ್ತು ಈ ಬಗ್ಗೆ ಇಲಾಖೆಯ ಕಾರ್ಯಪಾಲಕ ಅಭಿಯಂತರರನ್ನು ಸಹ ಭೇಟಿ ಮಾಡಿ ವಿವರಣೆ ಪಡೆದು ಕನ್ನಡ ಪ್ರಭ ಪತ್ರಿಕೆ ವಿಶೇಷ ವರದಿಯನ್ನು ಸಹ ಮಾಡಿತ್ತು. ಮುಂದಿನ 2 ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಲಾಗುತ್ತದೆ. ಅದುವರೆಗೂ ಗ್ರಾಹಕರು ಮಾಸಿಕ ಅಂದಾಜು ಬಿಲ್ನ ಹಣವನ್ನು ಸ್ಥಳಿಯ ಬೆಸ್ಕಾಂ ಕಚೇರಿಯಲ್ಲಿ ಪಾವತಿಸುವಂತೆ ಸೂಚಿಸಿದ್ದರು. ಅದರಂತೆ ಗ್ರಾಹಕರು 50 ರಿಂದ 150ರ ವರೆಗೆ ಮಾಸಿಕ ಅಂದಾಜು ವಿದ್ಯುತ್ ಬಿಲ್ನ್ನು ಪಾವತಿಸುತ್ತಿದ್ದರು. ಆದರೂ ಕೆಲವರಲ್ಲಿ 5ರಿಂದ 6 ತಿಂಗಳ ವರೆಗೆ ನೂತನ ವಿದ್ಯುದ್ದೀಕರಣ ಮೀಟರಿನ ಅಸಲಿ ಮಾಸಿಕ ವಿದ್ಯುತ್ ಬಿಲ್ ಎಷ್ಟು ಬರುತ್ತದೆಯೋ ಮತ್ತು ಒಮ್ಮೆಗೆ ಸಾವಿರಗಟ್ಟಲೆ ಬಿಲ್ ಬಂದರೆ ಹೇಗೆ ಕಟ್ಟುವುದು ಎಂಬ ಗೊಂದಲ ಗ್ರಾಹಕರನ್ನು ಕಾಡುತ್ತಿತ್ತು.
ಶಾಕ್ ಹೊಡೆಯಿತು: ಹೌದು ನಗರದ ಆಂಡ್ರಸನ್ಪೇಟೆ ವ್ಯಾಪ್ತಿಯ ಮಸ್ಕಂ ಬಡಾವಣೆಯ ನಿವಾಸಿ ಕಬಿಲ್ರಾಜ್ ಎಂಬುವರು ವಿದ್ಯುತ್ ಬಿಲ್ನ್ನು ನೋಡಿ ಶಾಕ್ಗೊಂಡಿದ್ದಾರೆ. ಬೆಸ್ಕಾಂ ಇಲಾಖೆ ವತಿಯಿಂದ ಮಾಸಿಕ ವಿದ್ಯುತ್ ಬಿಲ್ 4,83,809 ರು. ಬಂದಿದೆ. ಹಳೆಯ ಮೀಟರ್ ಇದ್ದಾಗ ತಿಂಗಳಿಗೆ ಇವರಿಗೆ 200 ರು. ಬಿಲ್ ಬರುತ್ತಿತ್ತು. ಆದರೆ ನೂತನ ಬಿಲ್ ಅಳವಡಿಸಿದ ನಂತರ 5 ತಿಂಗಳಿಂದ ಬಿಲ್ ಬಂದಿರುವುದಿಲ್ಲ. ಇದನ್ನು ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದಾಗ ಮಾಸಿಕ ಅಂದಾಜು 100 ಬಿಲ್ ಪಾವತಿಸುವಂತೆ ಸೂಚಿಸಿದ್ದರು. ಅದರಂತೆ ಕಬಿಲ್ರಾಜ್ ಅವರು ಪಾವತಿಸಿಕೊಂಡು ಬರುತ್ತಿದ್ದರು.
ಇದೇ ಜುಲೈ ತಿಂಗಳಿಂದ ನೂತನ ಮೀಟರಿನ ವಿದ್ಯುತ್ ಬಿಲ್ನ್ನು ಬೆಸ್ಕಾಂ ಇಲಾಖೆಯ ಸಿಬ್ಬಂದಿ ನೀಡುತ್ತಿದ್ದು ಅದರಂತೆ ಕಬಿಲ್ರಾಜ್ ಎಂಬ ಗ್ರಾಹಕರಿಗೆ ನೀಡಿದ ಬಿಲ್ 4,83,809 ನೀಡಿದ್ದಾರೆ. ಬಿಲ್ ನೋಡಿ ಕೆಲ ಕ್ಷಣ ಹೃದಯ ಬಡಿತ ನಿಂತಂತಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಬೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ವಿದ್ಯುತ್ ಬಿಲ್ ನೀಡುವ ಯಂತ್ರಗಳ ಲೋಪದೋಷಗಳಿಂದ ಈ ರೀತಿ ತೊಂದರೆಯಾಗಿದೆ. ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡು ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎನ್ನುತ್ತಾರೆ.
ನಗರದಲ್ಲಿ ನೂತನ ಮೀಟರ್ ಆಳವಡಿಸುವ ಕಾರ್ಯ ಪ್ರಾರಂಭವಾದಾಗನಿಂದಲೂ ಬೆಸ್ಕಾಂ ಇಲಾಖೆಯ ವತಿಯಿಂದ ಗ್ರಾಹಕರಿಗೆ ಒಂದಲ್ಲಾ ಒಂದು ಸಮಸ್ಯೆ ಆಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಯಾಗಲೀ, ಅಭಿಯಂತರವಾಗಲೀ ಗ್ರಾಹಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬದಲಿಗೆ ಯಾವುದಾದರೂ ಒಂದು ನೆಪಗಳನ್ನು ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ ಎಂಬುದು ಕ್ಷೇತ್ರದ ಜನತೆಯ ಆರೋಪವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement