ಬಸ್ ಡೋರ್ನಿಂದ ಆಯ ತಪ್ಪಿ ಬಿದ್ದು ಕ್ಲೀನರ್ ಸಾವು
ಚಿಂತಾಮಣಿ: ಖಾಸಗಿ ಬಸ್ಸೊಂದು ಲಾರಿಯನ್ನು ಹಿಂದಿಕ್ಕಲು ಹೋದ ಪರಿಣಾಮ ಕ್ಲೀನರ್ ಆಯ ತಪ್ಪಿ ಡೋರ್ನಿಂದ ಕೆಳಗೆ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಸಂದ್ರದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಚಿಂತಾಮಣಿ-ಬೆಂಗಳೂರು ಮಾರ್ಗದಲ್ಲಿ ಅತಿವೇಗದಿಂದ ಬಂದ ಖಾಸಗಿ ಬಸ್ ಲಾರಿಯೊಂದನ್ನು ಹಿಂದಿಕ್ಕಲು ಯತ್ನಿಸಿದಾಗ ಬಸ್ಸಿನ ಕ್ಲೀನರ್ ಪರಮಾಚನಹಳ್ಳಿ ಗ್ರಾಮದ ನಾಗೇಶ್(25) ಆಯ ತಪ್ಪಿ ಡೋರ್ನಿಂದ ಕೆಳಗೆ ಬಿದ್ದ ಪರಿಣಾಮ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಸಬ್ ಇನ್ಸೆಪೆಕ್ಟರ್ ರಾಘವೇಂದ್ರ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ನಂತರ ಬಸ್ಸನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.