ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜ್ಯ ಬಜೆಟ್ನಲ್ಲಿ ಖಾಸಗೀಕರಣದ ವಾಸನೆ: ಡಿವೈಎಫ್ಐ

Rashmi Kasaragodu
Updated On : 18 Jul 2013, 1:04 am

ಮಾಲೂರು: ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಜೆಟ್ನಲ್ಲಿ ಅಹಿಂದ ಜನರಿಗೆ ವಂಚಿಸುವ ಕೆಲಸ ಮಾಡಿದ್ದಾರೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ನ ರಾಜ್ಯ ಕಾರ್ಯದರ್ಶಿ ರಾಜಶೇಖರ್ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಮೇಲ್ನೋಟಕ್ಕೆ ಅಹಿಂದಾ ಪರ, ಕೃಷಿಕರ ಪರವೆಂಬಂತೆ ಇರುವ ಬಜೆಟ್ ಹಿಂದೆ ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣಕ್ಕೆ ಒಳಪಡಿಸುವ ಹುನ್ನಾರ ನಡೆದಿದೆ ಎಂದು ಆಪಾದಿಸಿದರು.
ರೈತರ ಭೂಮಿಯನ್ನು ರೈತರಲ್ಲದವರು ಕೊಂಡುಕೊಳ್ಳಲು ಇರುವ ನಿಷೇಧವನ್ನು ತೆಗೆದುಹಾಕಿ ಭೂ ಸುಧಾರಣ ಕಾಯ್ದೆ ತಿರುಳನ್ನೇ ನಾಶಮಾಡುವ ಮೂಲಕ ಕೃಷಿಕರಿಗೆ ತಲ ತಲಾಂತರವಾಗಿ ಉದ್ಯೋಗ ನೀಡುವ ಭೂಮಿಯನ್ನೇ ಅವರಿಂದ ಕಸಿದುಕೊಳ್ಳುವ ಕುತಂತ್ರ ಈ ಬಜೆಟ್ನಲ್ಲಿದೆ ಎಂದರು. ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಬಜೆಟ್ ವೇಳೆಯಲ್ಲಿ ತಿಳಿಸುವಾಗ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಕಳಕಳಿ ತೋರಿಸುತ್ತದೆ ಎಂದು ಗೇಲಿ ಮಾಡಿದರು. ಜನ-ಕೃಷಿಕರ ವಿರೋಧಿಯಾಗಿರುವ ಈ ಬಜೆಟ್ನ್ನು ಮರುಪರಿಶೀಲಿಸಿ, ಉದ್ಯೋಗ ಸೃಷ್ಟಿಸುವ ನೀತಿ ಅನುಸರಿಸಿ ಎಂದು ಮನವಿ ಮಾಡಿದರು. ಡಿವೈಎಫ್ಐನ ಜಂಟಿ ಕಾರ್ಯದಶಿ ಬಿ.ವಿ.ಸಂಪಂಗಿ ಮಾತನಾಡಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಛಲಪತಿ, ಸುರೇಶ್, ಬಿ.ವಿ.ರಾಥ, ಶ್ರೀನಿವಾಸ್, ಮುನಿಸ್ವಾಮಿ, ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement