ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರಿಗೆ ವೃತ್ತಿಪರ ಕೌಶಲ್ಯ ಅಗತ್ಯ: ಅನುರೂಪ

Rashmi Kasaragodu
Updated On : 18 Jul 2013, 1:00 am

ಗೌರಿಬಿದನೂರು: ರೈತರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಅವರನ್ನು ಸಶಕ್ತರನ್ನಾಗಿ ಮಾಡುವುದು, ಭೂಮಿಗೆ ಬಿದ್ದ ಮಳೆನೀರಿನ ಸಂಗ್ರಹ, ಸಮಗ್ರ ಬೆಳೆ ನಿರ್ವಹಣೆ, ಕಡಿಮೆ ಖರ್ಚಿನಲ್ಲಿ ಆರೋಗ್ಯಕರ ಬೆಳೆ ಬೆಳೆಯುವ ಕಾರ್ಯಗಳ ಬಗ್ಗೆ ತರಬೇತಿ ಶಿಬಿರಗಳಲ್ಲಿ ರೈತರು ಭಾಗವಹಿಸಿ ತಮ್ಮ ವೃತ್ತಿಪರ ಬೇಸಾಯದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎಂ.ಅನುರೂಪರವರು ರೈತರಿಗೆ ಹೇಳಿದರು.
ತಾಲೂಕಿನ ಕಾಟನಾಗೇನಹಳ್ಳಿ ದಾನಿರೈತ ದೇವರಾಜ್ರವರ ಕೃಷಿ ಭೂಮಿಯಲ್ಲಿ ಭೂ ಚೇತನ ಯೋಜನೆಯ ರೈತ ಕ್ಷೇತ್ರ ಪಾಠಶಾಲೆಗೆ ಚಾಲನೆ ನೀಡಿ ಇಲಾಖೆಯ ವತಿಯಿಂದ ಗ್ರಾಮೀಣ ಭಾಗದ ಜನತೆಗೆ ಸಿಗುವ ಪ್ರಯೋಜನೆಗಳು ಮತ್ತು ವಿವಿಧ ತರಬೇತಿಗಳ ಬಗ್ಗೆ ತಿಳಿಸಿಕೊಟ್ಟರು.
ಪ್ರಾರಂಭದಲ್ಲಿ ರೈತ ಅನುವುಗಾರ ಎಚ್.ಎನ್.ಕಿರಣ್ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕುಮಾರಿ ಕೆ.ವಿ.ಭವ್ಯ, ರೈತ ಅನುವುಗಾರರಾದ ಸಿ.ಎ.ಗೋವಿಂದರಾಜು, ಶಿವಕುಮಾರ್, ಹರೀಶ್, ಗ್ರಾಮದ ಮುಖಂಡರು ಹಾಗೂ ಕ್ಷೇತ್ರ ಪಾಠಶಾಲೆಗೆ ದಾಖಲಾದ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement