22ರಂದು ಸಾಯಿಬಾಬಾಗೆ ಅಭಿಷೇಕ
ಬಂಗಾರಪೇಟೆ: ಇದೇ ತಿಂಗಳು 22ರಂದು ಗುರುಪೂರ್ಣಿಮ ಪ್ರಯುಕ್ತ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ಬಾಬಾ ಅವರ ಪಾದಿಕೆಗಳು ಪಟ್ಟಣದ ಸಾಯಿಬಾಬಾ ದೇವಾಲಯಕ್ಕೆ ಆಗಮಿಸಲಿದೆ. 22ರಂದು ಬೆಳಗ್ಗೆ ಬಾಬಾ ಮಂದಿರದಲ್ಲಿ ಪಂಚಾಮೃತ ಅಭಿಷೇಕ, 9.30ಕ್ಕೆ ಸತ್ಯನಾರಾಯಣಸ್ವಾಮಿ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಆರತಿ, 6.30ಕ್ಕೆ ವಿಷ್ಣು ಸಹಸ್ರನಾಮ, 7ಕ್ಕೆ ಭಜನೆ, 7.45ಕ್ಕೆ ಚಾವಡಿ ಉತ್ಸವ, 8ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಪಾಲ್ಗೊಳ್ಳಲು ಕೋರಲಾಗಿದೆ.