ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು; ಎಲ್ಲೆಡೆ ಸಂಭ್ರಮ

Rashmi Kasaragodu
Updated On : 19 Jul 2013, 12:35 pm

ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಜು. 18
ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡು ಪ್ರಭು ಕೆಂಪೇಗೌಡರ ಹೆಸರನ್ನಿಟ್ಟಿರುವುದನ್ನು ಸ್ವಾಗತಿಸಿ ಒಕ್ಕಲಿಗರ ಸಂಘದ ಮುಖಂಡರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮಾಚರಣೆಯ ಮೆರವಣಿಗೆ ನಡೆಸಿ ಬಲಮುರಿ ವೃತ್ತದಲ್ಲಿ ಜಮಾಯಿಸಿದ ಒಕ್ಕಲಿಗ ಸಂಘಟನೆಯ ಮುಖಂಡರು ಪಟಾಕಿ ಸಿಡಿಸಿ ನಾಡಪ್ರಭು ಕೆಂಪೇಗೌಡರ ಪರ ಜೈಕಾರಗಳನ್ನು ಕೂಗಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನಿಟ್ಟಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದರು.
ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣವಾದಾಗಿನಿಂದಲೂ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು ನಾಮಂಕಿತ ಮಾಡುವಂತೆ ಅನೇಕರು ಒತ್ತಾಯಿಸಿಕೊಂಡು ಬಂದಿದ್ದು ಇದೀಗ ಕೇಂದ್ರ ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಕೆಂಪೇಗೌಡರವರ ಹೆಸರನ್ನು ನಿಲ್ದಾಣಕ್ಕಿಡುವ ನಿರ್ಧಾರವನ್ನು ತಿಳಿಸಿದೆ. ಇದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಂಪೇಗೌಡರವರು ಬೆಂಗಳೂರು ನಿರ್ಮಾಣ ಕರ್ತೃ ಆಗಿದ್ದಾರೆ. ತಮ್ಮ ಹೋರಾಟದ ಮೂಲಕ, ಉತ್ತಮ ಆಡಳಿತದ ಮೂಲಕ ಕನ್ನಡ ನಾಡಿಗೆ ಕೊಡುಗೆಯನ್ನು ನೀಡಿದ್ದಾರೆ. ಇಂತಹ ನಾಯಕನಿಗೆ ವಿಮಾನ ನಿಲ್ದಾಣಕ್ಕೆ ಅವರ ಹೆಸರಿನ್ನಿಡುವ ಮೂಲಕ ಇದೀಗ ಗೌರವ ಸಲ್ಲಿಸಿದಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಒಕ್ಕಲಿಗರ ಸಂಘದ ಮುಖಂಡರಾದ ಕೆ.ವಿ. ನಾಗರಾಜ್, ಕೆ.ಪಿ. ಶ್ರೀನಿವಾಸ ಮೂರ್ತಿ, ಎ.ವಿ. ಭೈರೇಗೌಡ, ಎಂ. ಪ್ರಕಾಶ್, ಜಿ.ಆರ್. ನಾರಾಯಣಸ್ವಾಮಿ, ಮುನೇಗೌಡ, ಯಲುವಹಳ್ಳಿ ಸೊಣ್ಣೇಗೌಡ, ಮಂಚನಬಲೆ ಶ್ರೀನಿವಾಸ್, ಕೆ.ಆರ್. ರೆಡ್ಡಿ, ರಾಮಣ್ಣ, ನಾಗರಾಜಜ್ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement