ಆಧಾರ್ಗೆ ಹಣ ಪಾವತಿಸಬೇಡಿ
ಕೋಲಾರ: ಕೆಲವು ವಂಚಕ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಆಧಾರ್ ನೋಂದಣಿ ಕಾರ್ಯ ಸುಗಮಗೊಳಿಸುವುದಾಗಿ ಅರ್ಜಿದಾರರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಮೋಸ ಹೋಗದಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಧಾರ್ ನೋಂದಣಿ ದೇಶಾದ್ಯಂತ ಸಂಪೂರ್ಣ ಶುಲ್ಕ ರಹಿತ ಉಚಿತ ಸೇವೆಯಾಗಿದೆ. ಯಾವುದೇ ವ್ಯಕ್ತಿ ಮಧ್ಯವರ್ತಿಗಳಿಗೆ ಇಲ್ಲವೇ ವಂಚಕರಿಗೆ ಹಣ ಪಾವತಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಯಾರಾದರೂ ಹಣ ಪಡೆದಲ್ಲಿ ಅಥವಾ ದಾರಿ ತಪ್ಪಿಸಿದಲ್ಲಿ ಅಂತಹ ವಂಚಕ ವ್ಯಕ್ತಿ ಹಾಗೂ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಸಕ್ಕರೆ, ಗೋಧಿ
ವಿತರಣೆಗೆ ಆಗ್ರಹ
ಶ್ರೀನಿವಾಸಪುರ: ಕಾಂಗ್ರೆಸ್ ಸರ್ಕಾರ 1ಗೆ 1 ಕೆ.ಜಿ. ಅಕ್ಕಿ ನೀಡುವ ಬಗ್ಗೆ ಘೋಷಣೆ ಕೂಗುತ್ತಾ ಹಿಂದೆ ಅಕ್ಕಿಯ ಜೋತೆಗೆ ಗೋಧಿ ಸಕ್ಕರೆ ಹಾಗೂ ಇತರೇ ರೀತಿಯ ಆಹಾರ ಪದಾರ್ಥ ನೀಡುತ್ತಿದೆ. ಈಗ ಬರಿ 30 ಕೆ.ಜಿ. ಅಕ್ಕಿಯನ್ನು ನೀಡುವ ಯೋಜನೆ ಕೈಗೆತ್ತಿಕೊಂಡಿರುವ ಸರ್ಕಾರ ಬಡವರಿಗೆ ಅಕ್ಕಿಯ ಜೊತೆಗೆ ನೀಡುತ್ತಿದ್ದ ಗೋಧಿ ಮತ್ತು ಸಕ್ಕರೆ ಸೌಲಭ್ಯ ನಿಲ್ಲಿಸದಂತೆ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಮತ್ತು ಜಿಲ್ಲಾ ಉಪಾಧ್ಯಕ್ಷರು ಸಿ.ವಿ. ಪ್ರಭಾಕರ್ ಗೌಡ ಒತ್ತಾಯಿಸಿದ್ದಾರೆ.
ನಾಳೆ ಸಾಮಾನ್ಯ ಸಭೆ
ಕೋಲಾರ: ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ ಜಿಪಂ ಅಧ್ಯಕ್ಷೆ ಚೌಡೇಶ್ವರಿ ಅಧ್ಯಕ್ಷತೆಯಲ್ಲಿ ಜು.20ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಸಲಾಗಿದೆ.