ಎಸ್ಡಿಎಂಸಿ ಅಧ್ಯಕ್ಷರಾಗಿಕಗ್ಗನಹಳ್ಳಿ ಬಾಬು
ಮುಳಬಾಗಲು: ಪಟ್ಟಣದ ಬಂಗ್ಲಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ 2013-14ನೇ ಸಾಲಿನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕಗ್ಗನಹಳ್ಳಿ ಬಾಬು ಮತ್ತು ಉಪಾಧ್ಯಕ್ಷರಾಗಿ ಕಸ್ತೂರಿ ಛಲವಾದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಕಗ್ಗಿನಹಳ್ಳಿ ಬಾಬು ಮಾತನಾಡಿ, ಶಾಲಾ ಅಭಿವೃದ್ಧಿ ಪದಾಧಿಕಾರಿಗಳು, ಶಿಕ್ಷಕರ ಜತೆ ಚರ್ಚಿಸಿ ಶಾಲೆ ಅಭಿವೃದ್ಧಿ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಶಾಸಕ ಕೊತ್ತೂರು ಮಂಜುನಾಥ್ರವರಿಗೆ ಶಾಲಾಭಿವೃದ್ಧಿಗೆ ಅನುದಾನ ನೀಡಲು ಮನವಿ ಸಲ್ಲಿಸಲಾಗುವುದು ಎಂದರು.
ಪದಾಧಿಕಾರಿಗಳಾಗಿ ಕೆ.ಎಚ್. ಮುನಿರಾಜ್, ಬಿ.ಎನ್.ಸುರೇಶ್, ಯೂಸುಫ್ ಸೈಯಾದ್, ವೆಂಕಟೇಶ್, ಪ್ರಸಾದ್, ಸಿರಾಜ್, ತುಳಸಮ್ಮ, ಕರ್ಣಚಾರಿ, ಅಮರಾವತಿ, ಕೃಷ್ಣಮ್ಮ ಅವಿರೋಧವಾಗಿ ಆಯ್ಕೆಯಾದರು.