ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಒಲೆ ಇಲ್ಲದ ಅಡುಗೆ, ಬೇಯಿಸದ ಆಹಾರ ಪ್ರದರ್ಶನ

Rashmi Kasaragodu
Updated On : 19 Jul 2013, 12:37 pm

ಚಿಂತಾಮಣಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹೈದರಾಲಿ ನಗರದ ಅಂಗನವಾಡಿ ಕೇಂದ್ರದಲ್ಲಿ ಒಲೆ ಇಲ್ಲದ ಅಡಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಟ್ಟಣದ ವ್ಯಾಪ್ತಿಯ 31 ಅಂಗನವಾಡಿ ಕೇಂದ್ರಗಳ ಅಂಗನವಾಡಿ ಸಹಾಯಕಿಯರು ವಿವಿಧ ರೀತಿಯ ಬೇಯಿಸದ ಆಹಾರ ಪದಾರ್ಥಗಳು, ಪಾನೀಯಗಳನ್ನು ಸಿದ್ದಪಡಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಅಂಗನವಾಡಿ ಮೇಲ್ವಿಚಾರಕಿ ವೆಂಕಟನಾರಾಯಣಮ್ಮ ಮಾತನಾಡಿ, ಬೇಯಿಸದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನೂರಕ್ಕೆ ನೂರರಷ್ಟು ಪೋಷಕಾಂಶಗಳು ದೇಹಕ್ಕೆ ಲಭಿಸುತ್ತವೆಂದು, ಜೀರ್ಣಕ್ರಿಯೆಯೂ ಉತ್ತಮವಾಗುವುದೆಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳನ್ನು ಮೊದಲ ಬಾರಿಗೆ ಇಲ್ಲಿ ಆಯೋಜಿಸಲಾಗಿದ್ದು ಮುಂದೆ ಇದನ್ನು ಪಟ್ಟಣದ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಏರ್ಪಡಿಸಿ ಅಲ್ಲಿನ ತಾಯಂದಿಯರಿಗೆ ಹಾಗೂ ಜನಸಾಮಾನ್ಯರಿಗೆ ಒಲೆ ಇಲ್ಲದ ಅಡಿಗೆಯ ಬಗ್ಗೆ ತರಬೇತಿ ನೀಡಲಾಗುವುದೆಂದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಯುನಾನಿ ವೈದ್ಯಾಧಿಕಾರಿ ಡಾ.ಗೀತಾಂಜಲಿ, ಹಿರಿಯ ಆರೋಗ್ಯ ನಿರೀಕ್ಷಕ ಗೋಪಾಲಕೃಷ್ಣ, ಮಹಿಳಾ ಆರೋಗ್ಯ ಸಹಾಯಕಿ ಲಿಲ್ಲಿ ವಿಕ್ಟೋರಿಯಾ ಮುಂತಾದವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸುರೇಖಾ ವಿಜಯ್ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಾಜುನ್ನೀಸಾ, ಮಾಜಿ ನಗರಸಭಾ ಸದಸ್ಯ ಟಿ.ಶ್ರೀನಿವಾಸ್, ಸಾಹಿತ್ಯ ವೇದಿಕೆಯ ಕೆ.ಎಸ್.ನೂರುಲ್ಲಾ, ಅಸ್ಲಂ, ಇಮ್ರಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement