ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುರುಭವನ ಪೂರ್ಣಕ್ಕೆ ಆಗ್ರಹ

Rashmi Kasaragodu
Updated On : 19 Jul 2013, 12:39 pm

ಕೆಜಿಎಫ್: ಕೆಜಿಎಫ್ನಲ್ಲಿ ಪತ್ರಕರ್ತರ ಭವನ ಸ್ಥಾಪಿಸಬೇಕು ಮತ್ತು ಕಳೆದ 8 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಗುರುಭವನ ಕಟ್ಟಡ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ರಸ್ತೆತಡೆ ಪ್ರತಿಭಟನೆ ನಡೆಸಿದರು. ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ  ಪತ್ರಕರ್ತರ ಭವನ ನಿರ್ಮಾಣವಾಗಿದೆ. ಆದರೆ ಹೆಚ್ಚು ಪತ್ರಕರ್ತರಿದ್ದರೂ ಈವರೆಗೆ ಕೆಜಿಎಫ್ನಲ್ಲಿ ಪತ್ರಕರ್ತರ ಭವನ ಕಚೇರಿ ನಿರ್ಮಾಣವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ನಗರ ವ್ಯಾಪ್ತಿಯಲ್ಲಿ ಪತ್ರಕರ್ತರ ಭವನ ನಿರ್ಮಾನಕ್ಕೆ ನಿವೇಶನ ನೀಡಬೇಕು ಎಂದರು. ಅದೇ ರೀತಿ ಕೆಜಿಎಫ್ನಲ್ಲಿ ಸಾವಿರಾರು ಶಿಕ್ಷಕರು ಮತ್ತು ಶಿಕ್ಷಕರ ಸಂಘಗಳಿಗೆ ಸಮಾರಂಭಗಳು, ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ 8 ವರ್ಷಗಳಿಂದ ಶಿಕ್ಷಕರ ಗುರುಭವನ ಕಟ್ಟಡ ನಿರ್ಮಾಣವಾಗದೆ ವಿಳಂಬವಾಗುತ್ತಿದೆ. ಬಡ ಶಿಕ್ಷಕರು ತಮ್ಮ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಖಾಸಗಿ ಸ್ಥಳಗಳನ್ನು ಬಾಡಿಗೆಗೆ ಪಡೆಯಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅದಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಈ ಎರಡೂ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವೃತ್ತನಿರೀಕ್ಷಕ ಟಿ.ಸಿ.ವೆಂಕಟೇಶ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ನಂಜುಂಡಪ್ಪ, ನಗರ ಅಧ್ಯಕ್ಷ ಸುಬ್ರಮಣಿ, ಮಹಿಳಾ ಅಧ್ಯಕ್ಷೆ ಪಲ್ಲವಿ, ಕನ್ನಡ ಪರ ಹೋರಾಟಗಾರ ವಿ.ಎಸ್.ಪ್ರಕಾಶ್, ಚಲಪತಿ, ತಿಮ್ಮರಾಜು, ಶ್ರೀನಿವಾಸ್, ನಾಗರಾಜ್, ವೆಂಕಟೇಶಪ್ಪ, ಕೃಷ್ಣಮೂರ್ತಿ ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಶಿಬಿರ
ಕೆಜಿಎಫ್: ಮಹಿಳಾ ಪೊಲೀಸ್ ಸಿಬ್ಬಂದಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ಕರಾಟೆ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಕೆಜಿಎಫ್ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವತಿಯಿಂದ ನಡೆದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ನಂತರ ಮಾತನಾಡಿದ ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿಕಟೋಚ್ ಸಫೆಟ್ ಅವರು ಜಿಲ್ಲೆಯ ಎಲ್ಲಾ ಮಹಿಳಾ ಪೊಲೀಸ್ ಸಿಬ್ಬಂದಿಗಳು ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿ ಕರ್ತವ್ಯ ನಿರ್ವಹಿಸುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಅದೇ ರೀತಿ ಕಠಿಣವಾದ ಕೆಲಸ ಕಾರ್ಯಗಳಲ್ಲಿ ತೊಡಗುವ ಪೊಲೀಸ್ ಮಹಿಳಾ ಸಿಬ್ಬಂದಿ ತಮ್ಮ ಮುಂದೆಯಿರುವ ಅಪಾಯಕಾರಿ ಸನ್ನಿವೇಶಗಳಿಂದ ತಮ್ಮನ್ನು ಹಾಗೂ ಸಾರ್ವಜನಿಕರನ್ನು ರಕ್ಷಿಸಿಕೊಳ್ಳಲು ಕರಾಟೆ ಯಂತಹ ತಾಂತ್ರಿಕ ವಿಧ್ಯೆಗಳನ್ನು ಕಲಿಯಬೇಕು ಎಂದರು. ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ. ಜಯಂತಿ, ಎಸ್.ತುಮ್ಸಿ ಅವರಿಂದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕ್ಯಾನ್ಸರ್ ಹಾಗೂ ಇತರೇ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಿದರು.  ಇದೇ ವೇಳೆ ಭಾರತದ ಕರಾಟೆ ಶಾಲೆಯ ಬ್ಲಾಕ್ ಬೆಲ್ಟ್ 4ನೇ ಡಾನ್ ಕೆನ್ನೆತ್ ಶಾಟ್ಕನ್ ಕರಾಟೆ ಮುಖ್ಯಸ್ಥರಾದ ಎಸ್.ಆರ್. ಆರತಿ ಅವರಿಂದ ಕರಾಟೆ ಕಲಿಕೆಯಿಂದ ಉಪಯೊಗದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು ಹಾಜರಿದ್ದರು.
ಟ್ರ್ಯಾಕ್ಟರ್ ಡಿಕ್ಕಿ: ಇಬ್ಬರ ಸಾವು
ಬಂಗಾರಪೇಟೆ:  ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಕಾಮಸಮುದ್ರದಲ್ಲಿ ನಡೆದಿದೆ. ಕೊಳಮೂರು ಗ್ರಾಮದ ಸಹೋದರರಾದ ಗೋಪಾಲ ರಾವ್ (40) ಮತ್ತು ಸುಂದರೇಶ್ (35) ಮೃತಪಟ್ಟವರು. ಬುಧವಾರ ರಾತ್ರಿ ಕೆಜಿಎಫ್ ಕಡೆಯಿಂದ ತಮ್ಮ ಗ್ರಾಮಕ್ಕೆ ಹೋಗಲು ಈ ಇಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಕಾಮಸಮುದ್ರ ಕಡೆಯಿಂದ ಬರುತ್ತಿದ್ದ ವಟ್ಟಿಗಲ್ ಗ್ರಾಮದ ಟ್ರ್ಯಾಕ್ಟರ್ ತಿರುವಿನಲ್ಲಿ ಮುಖಾಮುಖಿಯಾಯಿತು.  ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement