ನೂತನ ಎಎಸ್ಪಿ ಅಧಿಕಾರ ಸ್ವೀಕಾರ
ಕನ್ನಡಪ್ರಭ ವಾರ್ತೆ ಕೋಲಾರ ಜು.18
ಉಡುಪಿ ಜಿಲ್ಲೆಯ ಕೋಸ್ಟಲ್ ಸೆಕ್ಯೂರಿಟಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿಯಾಗಿ ಕೆಲಸ ನಿರ್ವಹಿಸಿರುವ ಐ.ಎಂ.ಜಮೀಲ್ ಅವರು ಗುರುವಾರ ಕೋಲಾರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಜಿಲ್ಲೆಯ ಹೆಚ್ಚುವರಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಭಗವಾನ್ದಾಸ್ ಅವರನ್ನು ಸರ್ಕಾರ ಬೆಂಗಳೂರು ವಿಶೇಷ ಟಾಸ್ಕ್ಫೋರ್ಸ್ ಉನ್ನತ ಹುದ್ದೆಗೆ ವರ್ಗಾಯಿಸಿದ್ದು ಇವರ ಜಾಗಕ್ಕೆ ಐ.ಎಂ. ಜಮೀಲ್ ಬಂದಿದ್ದಾರೆ.