ಮುಳಬಾಗಲು ಸರ್ಕಾರಿ ನೌಕರರ ಚುನಾವಣೆ ಕಣದಲ್ಲಿ 36 ಅಭ್ಯರ್ಥಿಗಳು ಅಂತಿಮ
ಮುಳಬಾಗಲು: ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಮುಳಬಾಗಲು ಶಾಖೆ ಚುನಾವಣೆಗೆ ಮಂಗಳವಾರ ಸಂಜೆ ನಾಮಪತ್ರ ಪಡೆಯಲು ಕೊನೆಯ ದಿವಸವಾಗಿದ್ದು ಅಂತಿಮ ಕಣದಲ್ಲಿ 36 ಅಭ್ಯರ್ಥಿಗಳು ಉಳಿದಿದ್ದಾರೆ. 24 ಇಲಾಖೆಗಳಿಂದ 30 ಸ್ಥಾನಗಳಿಗೆ 60ಕ್ಕೂ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದರು.
ಅವಿರೋಧ ಆಯ್ಕೆ: ಆಹಾರ ಇಲಾಖೆಯಿಂದ ಆರ್.ಕೊಂಡಪ್ಪ, ಲೋಕೋಪಯೋಗಿ ಇಲಾಖೆಯಿಂದ ಟಿ.ಪಿ.ಮಂಜುನಾಥ್, ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜಿಗೆ ಜಯರಾಮರೆಡ್ಡಿ, ಅರಣ್ಯ ಇಲಾಖೆಯಿಂದ ಕೆ.ಸೀನಪ್ಪ, ಅಬಕಾರಿ ಇಲಾಖೆಯಿಂದ ಚಿರಂಜೀವಿ, ಕೈಗಾರಿಕಾ ಹಾಗೂ ವಾಣಿಜ್ಯ ಐಟಿಐ ಕ್ಷೇತ್ರದಿಂದ ಮುನಿರಾಜಪ್ಪ, ಖಜಾನೆ ಇಲಾಖೆಯಿಂದ ಪಿ.ಎಸ್.ಶಿವಪ್ರಕಾಶ್, ಭೂಮಾಪನ, ಭೂದಾಖಲೆ, ನೋಂದಣಿ ಇಲಾಖೆಯಿಂದ ಸುರೇಶ್ ವಿ.ಹುಚ್ಚಪ್ಪನವರ್, ನ್ಯಾಯಾಂಗ ಇಲಾಖೆಯಿಂದ ಎಂ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೈಯದ್ ಅಬೀದ್, ತಾಂತ್ರಿಕ ಶಿಕ್ಷಣದಿಂದ ಡಿ.ಚಂದ್ರಶೇಖರ್ಬಾಬು, ಜಲಾನಯನ ಇಲಾಖೆಯಿಂದ ಎಸ್.ರಾಜೇಂದ್ರನ್, ಪಶು ಸಂಗೋಪನೆಯಿಂದ ಎಂ.ಮಂಜುನಾಥ್, ವಾಣಿಜ್ಯ ತೆರಿಗೆ, ಮೀನುಗಾರಿಕೆ ಇಲಾಖೆಯಿಂದ ಬಿ.ಲೋಕೇಶ್, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ಜಿ.ಕೆ ಶಂಕರಪ್ಪ, ಕಂದಾಯ ಇಲಾಖೆಯಿಂದ ಎಂ.ಕೆ.ಮಂಜುನಾಥ್, ಕೆ.ಎನ್.ಅರವಿಂದ್, ಪ್ರಾಧಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ವಿ.ಉಮಾ ಓಬಳರೆಡ್ಡಿ, ಎಂ.ಸುಬ್ಬರಾಯಪ್ಪ, ಎಂ.ಪೈಜುಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಪಿಎಂಸಿ ವತಿಯಿಂದ ಒಂದು ಸ್ಧಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಖಾಲಿಯಾಗಿ ಉಳಿದಿದೆ.