ವಿಧಾನಸೌಧ ಚಲೋಗೆ 200 ಹಮಾಲಿಗಳು
ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಆಶ್ರಯದಲ್ಲಿ ಹಮಾಲಿಗಳು ವಿಧಾನಸೌಧ ಚಲೋ ಹೋರಾಟದಲ್ಲಿ ಭಾಗವಹಿಸಲು ಸುಮಾರು 200 ಕ್ಕೂ ಹೆಚ್ಚು ಹಮಾಲಿಗಳು ಬೆಂಗಳೂರಿಗೆ ತೆರಳಿದರು.
ಡಾ. ಹೆಚ್.ಎನ್. ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಬಿ. ಆಂಜನೇಯರೆಡ್ಡಿ ಮಾತನಾಡಿ, ಪ್ರತಿ ಹಮಾಲಿ ಕುಟುಂಬಕ್ಕೆ 1 ರೂ ನಂತೆ 30 ಅಕ್ಕಿ, ಉಚಿತ ನಿವೇಶನ, ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ, 55 ದಾಟಿದ ಎಲ್ಲಾ ಹಮಾಲಿ ಕಾರ್ಮಿಕರಿಗೆ ಖಾತ್ರಿಯಾದ ವೇತನ ನೀಡಬೇಕು, ಯುಪಿಎ ಸರಕಾರ ಜಾರಿ ಮಾಡಿರುವ ಚಿಲ್ಲರೆ ಮಾರಾಟದಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆಗೆ ರಾಜ್ಯ ಸರಕಾರ ಅವಕಾಶ ನೀಡಬಾರದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಹಮಾಲಿ ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಕಾರ್ಯದರ್ಶಿ ಮಂಜುನಾಥ, ಖಜಾಂಚಿ ರಾಮಚಂದ್ರ ಹಾಗೂ ವೆಂಕಟೇಶಪ್ಪ, ಚಕ್ರವರ್ತಿ,ಅನ್ವರ್ ಮುಂತಾದವರು ಹಾಜರಿದ್ದರು.