ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅನಾಥ ಅಸ್ವಸ್ಥನಿಗೆ ನೆರವಾದ ಆಟೋರಾಜ

Rashmi Kasaragodu
Updated On : 20 Jul 2013, 12:38 pm

ಕೋಲಾರ: ನರಕ ಯಾತನೆ ನಡುವೆ ಸಾವಿನಂಚಿನಲ್ಲಿದ್ದ ಅನಾಥ ವ್ಯಕ್ತಿಯೊಬ್ಬ ಭಜರಂಗದಳ ಮಾನವೀಯ ನೆರವಿನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರ ಹೊರ ವಲಯದ ಕೊಂಡರಾಜನ ಹಳ್ಳಿ ಗೇಟ್ಬಳಿ ಅಪರಿಚಿತ ವ್ಯಕ್ತಿಯೊಬ್ಬ ಅನೇಕ ದಿನಗಳಿಂದ ಮೈಮೇಲೆ ಬಟ್ಟೆ, ಹೊಟ್ಟೆಗೆ ಆಹಾರ ಇಲ್ಲದೆ, ಆರೈಕೆ ಹಾಗೂ ಆಶ್ರಯವಿಲ್ಲದೆ ಅಸ್ವಸ್ಥನಾಗಿ ಬಿದ್ದಿದ್ದ. ಈತನ ಕಾಲಿನ ಪಾದ ಗಾಯವಾಗಿ ಕೊಳೆತು ಹುಳುಗಳು ಬಿದ್ದಿದ್ದವು, ತಿಂಗಳಾನುಗಟ್ಟಲೆ ಸ್ನಾನವಿಲ್ಲದೆ, ಆರೈಕೆ ಇಲ್ಲದೆ ಈತನ ದೇಹ ಬಿಸಿಲು, ಮಳೆ, ಗಾಳಿಗೆ ಸಿಲುಕಿ ಜರ್ಝರಿತವಾಗಿತ್ತು.
ಅಸ್ವಸ್ಥನಾಗಿದ್ದ: ಕ್ಷೌರವಿಲ್ಲದೆ ತಲೆಯ ಹಾಗೂ ಗಡ್ಡದ ಕೂದಲು ಬೆಳೆದು ಹೋಗಿತ್ತು, ಮಲ ಮೂತ್ರಗಳನ್ನು ಇದ್ದಲ್ಲಿಯೇ ಮಾಡಿಕೊಂಡು ಅದರ ನಡುವೆಯೇ ಅಸಹಾಯಕನಾಗಿ ಅಸ್ವಸ್ಥನಾಗಿ ಮಲಗಿದ್ದ ಸ್ಥಿತಿಯಲ್ಲಯೇ ಇರುವಂತಾಗಿತ್ತು.
ಈತನನ್ನು ಕಂಡ ದಾರಿಹೋಕ ನೂರಾರು ಮಂದಿಯಲ್ಲಿ ಯಾರೊಬ್ಬರು ಸಹ ಸಹಾಯಕ್ಕೆ ಬಾರದೆ ಹಾಗೆ ಹೋಗಿದ್ದರು, ಇದರ ನಡುವೆ ಯಾರೋ ಕೆಲವರು ಆಹಾರ ಹಾಗೂ ಬಟ್ಟೆ ನೀಡಿದರೂ ಇದನ್ನು ಸ್ವೀಕರಿಸುವ ಶಕ್ತಿ ಹಾಗೂ ಪ್ರಜ್ಞೆಯಯೂ ಈತನಿಗೆ ಇರಲಿಲ್ಲ.
ಅಲ್ಲದೆ, ಕೊಳೆತ ಗಾಯ ಹಾಗೂ ದೇಹದ ದುರ್ಗಂಧದ ಪರಿಣಾಮ ಹತ್ತಿರ ಹೋಗಲಾಗದೆ ವಾಪಸ್ಸು ಹೋದವರು ಉಂಟು.
ಮೊನ್ನೆ ಬಂದ ಮಳೆಯ ನಡುವೆ ಈತನ ಸ್ಥಿತಿಯನ್ನು ಕಂಡ ಬಜರಂಗದಳದ ಧರ್ಮರಾಯ ನಗರದ ಮೋಹನ್ಕಾಂತ್, ಜೆ.ಎಸ್.ಶ್ರೀನಾಥ್ ಮತ್ತು ಸ್ನೇಹಿತರು ನೆರವಿಗೆ ಧಾವಿಸಿದ್ದಾರೆ. ಈತನಿಗೆ ಆರೈಕೆ ಹಾಗೂ ಆಶ್ರಯ ಒದಗಿಸುವ ಸಲುವಾಗಿ ಅನೇಕ ಸೇವಾ ಹಾಗೂ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿದಾಗ ಏನು ಪ್ರಯೋಜನವಾಗಿಲಿಲ್ಲ.
ಬಂದನೋ ಆಟೋರಾಜ: ಕೊನೆಗೆ ಇವರ ನೆರವಿಗೆ ಬಂದದ್ದು ಬೆಂಗಳೂರಿನ ನ್ಯೂ ಎ.ಆರ್.ಕೆ.ಮಿಷನ್ ಆಫ್ ಇಂಡಿಯಾ ಟ್ರಸ್ಟ್ ಇಂತಹ ಅನಾಥರ ರಕ್ಷಣೆಯಲ್ಲಿ ತೊಡಗಿದೆ. ಇದರ ಮುಖ್ಯಸ್ಥ ಆಟೋರಾಜ ಎಂಬುವರು ಮಾಹಿತಿ ಅರಿತು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಬಜರಂಗದಳದ ಕಾರ್ಯಕರ್ತರ ನೆರವಿನೊಂದಿಗೆ, ಅಸ್ವಸ್ಥ ವ್ಯಕ್ತಿ ಕಾಲಿನ ಕೊಳೆತ ಗಾಯ ಶುಚಿಗೊಳಿಸಿ, ಅದರಲ್ಲಿದ್ದ ಹುಳುಗಳನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ಸಂಸ್ಥೆಗೆ ಕಾರಿನಲ್ಲಿ ತೆಗೆದುಕೊಂಡು ಹೋದರು.
ಅಲ್ಲಿ ಈ ವ್ಯಕ್ತಿಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ, ಕ್ಷೌರ ಮಾಡಿಸಿ, ಆಹಾರ ಹಾಗೂ ಸೂಕ್ತ ಚಿಕಿತ್ಸೆ ಕೊಡಿಸಲಾಗಿ ಆತ ಚೇತರಿಸಿಕೊಂಡು ಗುಣಮುಖನಾಗುತ್ತಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement