ಇಂದು ಹಳೆಯೂರು ಶ್ರೀಆಂಜನೇಯ ಸ್ವಾಮಿ ಏಕಾದಶಿ ರಥೋತ್ಸವ
ಚಿಕ್ಕನಾಯಕನಹಳ್ಳಿ: ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಂದು ಪಟ್ಟಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತಿ ವಿಜೃಂಭಣೆಯಿಂದ ನಡೆಯುವ ರಥೋತ್ಸವ ಹಳೆಯೂರು ಶ್ರೀಆಂಜನೇಯಸ್ವಾಮಿ ರಥೋತ್ಸವ. 20ರಂದು ಶನಿವಾರ ಬೆಳಿಗ್ಗೆ 10ಗಂಟೆಗೆ ಪಟ್ಟಣದ ವಿಪ್ರಸಮಾಜದ ವತಿಯಿಂದ ನೆರವೇರುವ ಮಹಾಪೂಜೆಯ ನಂತರ ಪ್ರಾರಂಭವಾಗುವ ರಥೋತ್ಸವ ಮಧ್ಯಾಹ್ನ 12ಗಂಟೆಯ ವೇಳೆಗೆ ಪುರಸಭೆ ಮುಂಭಾಗಕ್ಕೆ ಬಂದು ನಿಲ್ಲುತ್ತದೆ. 21 ರಂದು ಭಾನುವಾರ ಅನ್ನಪೂರ್ಣೇಶ್ವರಿ ಕಲಾಸಂಘದಿಂದ ರಾಜ್ಯಮಟ್ಟದ ನೃತ್ಯಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.
ಚಿ.ನಾ.ಹಳ್ಳಿಯಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ
ಚಿಕ್ಕನಾಯಕನಹಳ್ಳಿ: ಆಷಾಡ ಮಾಸದ ಏಕಾದಶಿ ಜಾತ್ರೆ ಮುನ್ನಾದಿನವಾದ ಶುಕ್ರವಾರ ಹಳೆಯೂರು ಶ್ರೀಆಂಜನೇಯ ಸ್ವಾಮಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಭಕ್ತಾಧಿಗಳ ಸಮ್ಮುಖದಲ್ಲಿ ನಾಲ್ಕು ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಪಟ್ಟಣದ ನಾಲ್ಕು ಪ್ರಮುಖ ರಾಜಬೀದಿಗಳಲ್ಲಿ ಸಂಜೆ 4 ಗಂಟೆಗೆ ಪ್ರಾರಂಭವಾದ ಬೆಳ್ಳಿಪಲ್ಲಕ್ಕಿ ಉತ್ಸವ ಜಿಟಜಿಟ ಮಳೆಯ ನಡುವೆ ನಡೆಯಿತು. ಉತ್ಸವ ಬರುವ ಬೀದಿಯಲ್ಲಿರುವ ಪ್ರತಿಮನೆಯವರು ದೇವರಿಗೆ ಹಣ್ಣುಕಾಯಿ ಒಪ್ಪಿಸುವುದು ನಿರಂತರವಾಗಿ ನಡೆದಿತ್ತು.ಉತ್ಸವದ ಮುಂದೆ ಬರುವ ಕೆಂಚರಾಯಗಳಿಗೆ ಮಣೇವು ಹಾಕುವುದು,ಮುಂತಾದ ಕಾರ್ಯಕ್ರಮಗಳ ನಡುವೆ ಬೆಳ್ಳಿ ಪಲ್ಲಕ್ಕಿ ಜರುಗಿತು.