ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ ಖಂಡನೆ
ಕೋಲಾರ: ಆದಿಚುಂಚನಗಿರಿ ಶಾಖಾ ಮಠ ಮತ್ತು ಮಠಕ್ಕೆ ಸೇರಿರುವ ಕಾಲೇಜುಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿಯನ್ನು ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿದೆ.ಆದಿಚುಂಚನಗಿರಿ ಮಠದ ತೇಜೋವಧೆ ಮಾಡುವ ಉದ್ದೇಶದಿಂದ ಆದಾಯ ತೆರಿಗೆ ದಾಳಿ ನಡೆಸಲಾಗಿದೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಸಂಘ ಆರೋಪಿಸಿದೆ. ಕೋಲಾರದಲ್ಲಿ ಶುಕ್ರವಾರ ಸಂಜೆ ನಡೆದ ಒಕ್ಕಲಿಗರ ಸಂಘದ ಸಭೆಯಲ್ಲಿ ಆದಾಯ ತೆರಿಗೆ ದಾಳಿಯನ್ನು ತೀವ್ರವಾಗಿ ವಿರೋಧಿಸಲಾಯಿತು.
ಸಿಎಂ ವಿರುದ್ಧ ಆಕ್ರೋಶ: ವಿಧಾನಸೌಧ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರ ತೆರವುಗೊಳಿಸಿರುವ ಮುಖ್ಯಮಂತ್ರಿ ಕ್ರಮದ ಹಿಂದೆಯೂ ರಾಜಕೀಯ ದುರುದ್ದೇಶವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯಿಸಿದೆ. ಕೆ.ಎಂ.ಜೆ ಮೌನಿ, ಬಿಸಪ್ಪಗೌಡ, ಕೆ.ವಿ.ಶಂಕರಪ್ಪ, ಜಿಪಂ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ವಿ.ಕೃಷ್ಣಾರೆಡ್ಡಿ, ಗೋವಿಂದರಾಜು, ಪವನ್ನಾರಾಯಣ ಸ್ವಾಮಿ, ಕಲ್ಲಂಡೂರು ಲೊಕೇಶ್, ಕೃಷ್ಣಪ್ಪ, ಉರುಗಲಿ ರುದ್ರಸ್ವಾಮಿ, ಮುರಳಿ ಉಪಸ್ಥಿತರಿದ್ದರು.