ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಠಾಣೆ ಎದುರು ಮನೆಯಲ್ಲೇ ಕಳವು

Rashmi Kasaragodu
Updated On : 20 Jul 2013, 12:37 pm

ಕೆಜಿಎಫ್: ಪೊಲೀಸ್ ಠಾಣೆ ಎದುರೇ ಇರುವ ಮನೆಯ ಮುಂಬಾಗಿಲನ್ನು ಮುರಿದು ಒಳ ನುಗ್ಗಿದ್ದ ಕಳ್ಳರು ಬೀರುಮಿನಲ್ಲಿಟ್ಟಿದ್ದ ಲಕ್ಷಾಂತರ ನಗದು ಹಾಗೂ ಇತರೆ ವಸ್ತು ಕಳವು ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಗಣೇಶ್ಭವನ ಹೋಟಲ್ ಪಕ್ಕದ ಮನೆಯ ನಿವಾಸಿ ಎಲ್.ಎಸ್.ಸತ್ಯಕುಮಾರ್ ಎಂಬುವರು ತಮ್ಮ ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು.
ಇದಕ್ಕಾಗಿಯೇ ಕಾದಿದ್ದವರಂತೆ ಮನೆಯ ಮುಂಬಾಗಿಲು  ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 1.30 ಲಕ್ಷ ನಗದು, ಸುಮಾರು 35 ಸಾವಿರ ಬೆಲೆ ಬಾಳುವ ಗುಚ್ಚಿ ಕಂಪನಿ ಕೈ ಗಡಿಯಾರ ಸೇರಿದಂತೆ ಇತರೆ ವಸ್ತುಗಳನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಹೋಗಿದ್ದಾರೆ. ಪಕ್ಕದ ಕೊಠಡಿಯಲ್ಲಿದ್ದ ಮೂರು ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆಗಳು ಹಾಗೆಯೇ ಕಳ್ಳರು ಬಿಟ್ಟು ಹೋಗಿರುವುದು ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹೋಟೆಲ್ಗೆ ಕಸ ಗುಡಿಸಲು ಬಂದ ಕೆಲಸದಾಳು ಮನೆಯ ಬಾಗಿಲು ತೆರೆದಿರುವುದನ್ನು ನೋಡಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು ರಾಬರ್ಟ್ಸನ್ಪೇಟೆ ಠಾಣಾ ವೃತ್ತ ನಿರೀಕ್ಷಕ ಟಿ.ಸಿ.ವೆಂಕಟೇಶ್ ಹಾಗೂ ಸಿಬ್ಬಂದಿ ಆಗಮಿಸಿದರು. ಮನೆಯ ಮಾಲೀಕ ಸತ್ಯಕುಮಾರ್ ಅವರ ಅಳಿಯನಾದ ಜಾನ್ಪಾಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ರಕ್ಷಣಾಧಿಕಾರಿ ಡಾ.ರೋಹಿಣಿಕಟೋಚ್ ಸಫೆಟ್, ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯರನ್ನು ಬೆಚ್ಚಿ ಬೀಳಿಸಿದ ಕಳ್ಳತನ: ಕೆಜಿಎಫ್ ನಗರದ ವಿವಿಧೆಡೆ ನಿರಂತರವಾಗಿ ನಡೆಯುತ್ತಿರುವ ಮನೆ ಕಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳಿಂದ ಕ್ಷೇತ್ರದ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ. ನಗರದ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವರ್ಣ ನಗರದ ಮನೆಯ ಹಿಂಬಾಗಿಲನ್ನು ಮುರಿದು 3.5ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳರು ದೋಚಿಕೊಂಡು ಹೋದ ಬೆನ್ನಲ್ಲೇ ಈಗ ಅದೇ ಪೊಲೀಸ್ ಠಾಣೆ ಸಮೀಪದ ಮನೆಯೊಂದಲ್ಲಿ ಕಳ್ಳತನ ನಡೆದಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಕಳ್ಳತನ, ಸುಲಿಗೆ, ಹಲ್ಲೆ, ಕೊಲೆ, ಪ್ರಾಣ ಬೆದರಿಕೆ, ಗುಂಪು ಘರ್ಷಣೆ ಮುಂತಾದ ಹಲವು ಅಪರಾಧ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿದ್ದು ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ, ತಡೆಯುವಲ್ಲಿ ಅಥವಾ ನಿಯಂತ್ರಿಸುವಲ್ಲಿ ಕೆಜಿಎಫ್ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಕೆಜಿಎಫ್ ಕ್ಷೇತ್ರದ ಜನತೆಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement