ನೌಕರರ ಸಂಘಕ್ಕೆಅವಿರೋಧ ಆಯ್ಕೆ
ಕೆಜಿಎಫ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2013- 18ನೇ ಸಾಲಿನ ಕೆಜಿಎಫ್ ಯೋಜನಾ ಶಾಖೆಗೆ ಕಾರ್ಯಕಾರಿ 21 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಕೆಜಿಎಫ್ನ ಎಲ್ಲ ಸರ್ಕಾರಿ ಇಲಾಖೆಗಳಿಂದ ಸಂಖ್ಯೆಯ ಅನುಗುಣವಾಗಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೆಜಿಎಫ್ ಶಾಖೆಯ ಅಧ್ಯಕ್ಷರಾದ ಎಂ.ಸುಬ್ರಮಣಿ (ಪಲ್ಲವಿಮಣಿ) ಅವರ ಅಧ್ಯಕ್ಷತೆಯಲ್ಲಿ 13 ಇಲಾಖೆಗಳಿಂದ 21 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಎಂ.ಸುಬ್ರಮಣಿ (ಪಲ್ಲವಿಮಣಿ) (ಕಾಲೇಜು ಶಿಕ್ಷಣ ಇಲಾಖೆ) ಎಂ.ಎಸ್.ಹೇಮಂತ್ಕುಮಾರ್, ಪಿ.ವಿ.ಶ್ರೀನಿವಾಸ್, ಕೆ.ಜಿ.ಶ್ರೀನಿವಾಸ್, ಎಸ್. ಎನ್. ಚಾಯಾದೇವಿ, ಕೆ.ಚಂದ್ರಾರೆಡ್ಡಿ (ಪ್ರಾಥಮಿಕ ಶಿಕ್ಷಣ ಇಲಾಖೆ) ಬಿ.ಎಂ. ರವಿರೆಡ್ಡಿ (ಪ್ರೌಢ ಶಿಕ್ಷಣ ಇಲಾಖೆ) ಜಿ.ಮುನಿಯಪ್ಪ (ನ್ಯಾಯಾಂಗ ಇಲಾಖೆ) ದಾಸೇಗೌಡ (ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ) ಡಾ.ಬಿ.ಎಸ್. ಜಯರಾಂ (ಪಶುಪಾಲನೆ ಇಲಾಖೆ) ಗೋಪಾಲ (ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ) ಎಂ.ಎನ್.ಗಿರೀಶ್ (ಗಣಿ ಮತ್ತು ಭೂ ವಿಜ್ಞಾನ ಇಲಾಖೆ) ಗಿರೀಶ್ ಬಾಬು (ಅಬಕಾರಿ ಇಲಾಖೆ) ಟಿ.ನಾಗರಾಜ್ (ಉಪ ಖಜಾನೆ ಇಲಾಖೆ) ಎಚ್.ಎಂ.ತಾರಕೇಶ್ವರಿ ವಾಣಿಜ್ಯ ತೆರಿಗೆ ಇಲಾಖೆ) ಕೆ.ರಘುರಾಂ ಸಿಂಗ್, ವೈ.ಸಂಪಂತ್ಕುಮಾರ್ (ಕಂದಾಯ ಇಲಾಖೆ) ಎನ್.ಶ್ರೀನಿವಾಸ್ರೆಡ್ಡಿ, ಕೆ.ಶ್ರೀಧರ್, ಶರ್ಮಿಳ, ಇಲಂಗೋವನ್ (ಆರೇಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ). ಇಲಾಖೆ ನೌಕರರಿಗೆ, ಅವಿರೋಧ ಆಯ್ಕೆ ಯಾದ ಎಲ್ಲಾ ಇಲಾಖೆಯ ಸದಸ್ಯರಿಗೆ ಕೆಜಿಎಫ್ ಕ.ರಾ.ಸ.ನೌ. ಸಂಘದ ಅಧ್ಯಕ್ಷ ಎಂ.ಸುಬ್ರಮಣಿ (ಪಲ್ಲವಿಮಣಿ) ಅಭಿನಂದನೆ ಸಲ್ಲಿಸಿದ್ದಾರೆ.