ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಿ: ದೇವರಾಜ್
ಬಾಗೇಪಲ್ಲಿ: ಚಲನಚಿತ್ರ, ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ರಂಗಭೂಮಿ ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ, ಜನತೆ ರಂಗಭೂಮಿ ಕಲಾವಿದರ ಹಿತ ಕಾಪಾಡಬೇಕೆಂದು ರಂಗಭೂಮಿ ಕಲಾವಿದ, ನಟರಾಜ ನಾಟಕ ಕಲಾ ಸಂಘದ ಅಧ್ಯಕ್ಷ ದೇವರಾಜ್ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸುಮಾರು 48 ವರ್ಷಗಳಿಂದ ವಿವಿಧ ನಾಟಕ ಕಂಪನಿಗಳಲ್ಲಿ ಅಭಿನಯಿಸಿ ಅದರಿಂದ ಜೀವನ ಸಾಗಿಸುತ್ತಿದ್ದೆವು. ಒಂದು ಕಾಲದಲ್ಲಿ ಜನತೆಗೆ ಮನಂಜನೆಗಾಗಿ ನಾಟಕಗಳನ್ನು ನೋಡಲು ಹೆಚ್ಚಾಗಿ ಜನರು ಬರುತ್ತಿದ್ದರು. ಈಗ ಮಾಧ್ಯಮಗಳ ಕಡೆ ಜನರು ಹೆಚ್ಚಾಗಿ ಒಲವು ತೋರಿಸುತ್ತಿರುವುದರಿಂದ ರಂಗಭೂಮಿ ಕಲಾವಿದರು ಬೀದಿಗೆ ಬಿದ್ದಿದ್ದೇವೆ ಎಂದು ತಿಳಿಸಿದರು.
ಕರವೇ ಜಿಲ್ಲಾ ಕಾರ್ಯದರ್ಶಿ ಜಿ.ಚಂದ್ರಶೇಖರ್ ಮತ್ತಿತರರು ಮಾತನಾಡಿದರು.
ನಟರಾಜ ನಾಟಕ ಕಲಾ ಸಂಘದ ಗೌರವಾಧ್ಯಕ್ಷ ಶಿವಾನಂದ್, ಕರವೇ ಮುಖಂಡರಾದ ಬಿಟಿಸಿ ಸೀನಾ, ರಾಮು, ಮೂರ್ತಿ ಉಪಸ್ಥಿತರಿದ್ದರು.