ಗುರು ಪೂರ್ಣಿಮೆ: ಇಂದು ವಿಶೇಷ ಪೂಜೆ
ಕೆಜಿಎಫ್: ಭಾನುವಾರ ಗುರುಪೂರ್ಣಿಮ ಪ್ರಯುಕ್ತ ಕ್ಷೀ ಶಿರಡಿ ಸಾಯಿಬಾಬ ಸೇವಾ ಟ್ರಸ್ಟ್ ವತಿಯಿಂದ ಬಾಬಾ ಅವರ ಪಾದಿಕೆಗಳು ಕೆಜಿಎಫ್ ಕ್ಷೇತ್ರದ ಕ್ಯಾಸಂಬಳ್ಳಿ ಗ್ರಾಮದ ಜಕ್ಕರಸಕುಪ್ಪ ರಸ್ತೆಯ ಬಸವನಗುಡಿ ಮಿಟ್ಟಕ್ಕೆ ಬೆಳಗ್ಗೆ 10.10ಕ್ಕೆ ಆಗಮಿಸಿ ನಂತರ ಅಲ್ಲಿಂದ ನಗರದ ಪಾರಂಡಹಳ್ಳಿ ರಸ್ತೆಯ ರಮಣ ಮಹಿರ್ಷಿ ವೃದ್ಧಾಶ್ರಮ ಪಕ್ಕದ ಶಿರಡಿ ಸಾಯಿಬಾಬ ದೇವಾಲಯಕ್ಕೆ ಬೆಳಗ್ಗೆ 11.30ಕ್ಕೆ ತರಲಾಗುತ್ತದೆ ಎಂದು ದೇವಸ್ಥಾನ ಸಮಿತಿ ವತಿಯಿಂದ ತಿಳಿಸಲಾಗಿದೆ.
ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುವುದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.