ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಮತದಾರರ ತೀರ್ಪಿಗೆ ತಲೆಬಾಗಲಿ'

Rashmi Kasaragodu
Updated On : 21 Jul 2013, 1:16 am

ಚಿಂತಾಮಣಿ: ಮತದಾರರ ತೀರ್ಪಿಗೆ ಬದ್ಧರಾಗದೆ, ತಮ್ಮ ದೌರ್ಜನ್ಯ ದಬ್ಬಾಳಿಕೆಯಿಂದ ಮಾಜಿ ಶಾಸಕ ಸುಧಾಕರ್ ಕ್ಷೇತ್ರದಲ್ಲಿ ಇಲ್ಲದ ಅಪ್ರಚಾರ ಮಾಡಿ,  ಅಲ್ಲಲ್ಲಿ ಗಲಾಟೆ ಮಾಡಲು ತಮ್ಮ ಬೆಂಬಲಿಗರಿಂದ ಪ್ರೇರೇಪಿಸುತ್ತಿರುವುದು ಸಲ್ಲ ಎಂದು ಚಿಂತಾಮಣಿ ತಾಲೂಕು ಜೆಡಿಎಸ್ ಅಧ್ಯಕ್ಷ ತಳಗವಾರ ರಾಜಗೋಪಾಲ್ ಮಾಜಿ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹೊರ ವಲಯದ ಬೂರಗಮಾಕಲಹಳ್ಳಿ ಸಂಜೀವ ಸಮುದಾಯ ಭವನದಲ್ಲಿ ಶನಿವಾರ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣದಿಂದ ಬೇಸತ್ತು ಜೆಡಿಎಸ್ ಅಭ್ಯರ್ಥಿಯನ್ನು ಸ್ವಾಗತಿಸಿ ಗೆಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ 3 ರಾಜಕೀಯ ಶಕ್ತಿಗಳಾದ ಮಾಜಿ ಶಾಸಕ ಸುಧಾಕರ್, ಕಾಂಗ್ರೆಸ್ನ ವಾಣಿಕೃಷ್ಣಾರೆಡ್ಡಿ ಮತ್ತು ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ  ಅವರನ್ನು ಮತದಾರರು ತಿರಸ್ಕರಿಸಿ, ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿದ್ದ ಜೆ.ಕೆ.ಕೃಷ್ಣಾರೆಡ್ಡಿ ಅವರನ್ನು ಜನರು ಗೆಲ್ಲಿಸಿ 3 ರಾಜಕೀಯ ಮುಖಂಡರನ್ನು ತಿರಸ್ಕರಿಸಿ ಪಾಠ ಕಲಿಸಿದ್ದಾರೆ ಎಂದು ತಳಗವಾರ ರಾಜಗೋಪಾಲ್ ಅಭಿಪ್ರಾಯಪಟ್ಟರು.
ವಿಶ್ರಾಂತಿ ತೆಗೆದುಕೊಳ್ಳಿ: ಮಾಜಿ ಶಾಸಕ ಸುಧಾಕರ್ ಶಾಶ್ವತವಾಗಿ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಚಿಂತಾಮಣಿ ಮತದಾರರು ಆಜ್ಞೆ ಮಾಡಿದ್ದಾರೆ  ಎಂಬುದು ಮಾಜಿ ಶಾಸಕರು ಮರೆಯಬಾರದು ಎಂಬುದನ್ನು ಆರ್.ಪ್ರಕಾಶ್ ಕಿವಿಮಾತು ಹೇಳಿದರು.
ನಗರಸಭಾ ಸದಸ್ಯ ಡಿ.ಸಾದಪ್ಪ ಮಾತನಾಡಿ, ಜೆ.ಕೆ.ಕೃಷ್ಣಾರೆಡ್ಡಿ ನಾಯಕತ್ವದಲ್ಲಿ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಸಾಧಿಸಿ ಜಯಭೇರಿ ಬಾರಿಸಿದ್ದು ಮಾಜಿ ಶಾಸಕರಿಗೆ ಆದ ಮುಖಭಂಗ ಎಂದು  ನುಡಿದರು.  ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಷಫೀಕ್ ಉದ್ದೀನ್, ಜೆಡಿಎಸ್ ಮುಖಂಡರಾದ ಕೈವಾರ ಸುಬ್ಬಾರೆಡ್ಡಿ,ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ರಾಗುಟ್ಟಹಳ್ಳಿ ರಘುನಾಥರೆಡ್ಡಿ, ವಕೀಲ ಬಿ.ಆರ್.ಶ್ರೀನಾಥ್, ಗಂಜೂರು ಆಂಜನೇಯರೆಡ್ಡಿ, ಜಮೀಲ್ ಮತ್ತಿತರರು ಮಾತನಾಡಿದರು.  ಇದೆ ಸಂದರ್ಭದಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಹಿರಿಯ ಜೆಡಿಎಸ್ ಮುಖಂಡರನ್ನು ಸನ್ಮಾನಿಸಲಾಯಿತು. ಜೆಡಿಎಸ್ ಮುಖಂಡರಾದ ಹೆಚ್.ನಾರಾಯಣಸ್ವಾಮಿ, ದೊಡ್ಡ ಬೊಮ್ಮನಹಳ್ಳಿ ವೆಂಕಟರೆಡ್ಡಿ, ಯನುಮಲಪಾಡಿ ಚಂದ್ರಾರೆಡ್ಡಿ, ರಾಜಾಚಾರಿ, ಬಂದಾರ್ಲಹಳ್ಳಿ ಮಂಜುನಾಥ್, ರಾಚಾಪುರ ಶ್ರೀನಿವಾಸ್, ಮಸಲಹಳ್ಳಿ ಮಂಜು, ಕನ್ನಡ ಅಶ್ವತ್ಥ್, ಈಶ್ವರ್, ರವೀಂದ್ರಗೌಡ, ಜಲೀಲ್ಸಾಬ್ ಸೇರಿದಂತೆ ಇನ್ನೂ ಹಲವಾರು ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement